ಈ ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ!

Tue, 13 Dec 2022-12:52 pm,

ಜ್ಯೋತಿಷ್ಯದ ಪ್ರಕಾರ, ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ ಎನ್ನಲಾಗುತ್ತದೆ. ವಿಶೇಷವೆಂದರೆ, ಬೇರೆಯವರು ಇವರ ಮಾತಿನ ಮೋಡಿಗೆ ಬೇಗನೆ ಇವರ ಬಲೆಗೆ ಬೀಳುತ್ತಾರಂತೆ... ಅಂತಹ ರಾಶಿಚಕ್ರಗಳು ಯಾವುವು ತಿಳಿಯೋಣ... 

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಈ ರಾಶಿಯವರು ವಿನಾಕಾರಣ ಸುಳ್ಳು ಹೇಳುವ ಅಭ್ಯಾಸ ಹೊಂದಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಾರೆಂದರೆ, ಯಾರಿಗೂ ಅಷ್ಟು ಸುಲಭವಾಗಿ ಇವರ ಸುಳ್ಳು ಅರ್ಥವಾಗುವುದೇ ಇಲ್ಲ. ಇವರು ತಮ್ಮ ಮಾತಿನ ಮೋಡಿಯಲ್ಲಿ ಎಂತಹವರನ್ನೇ ಆದರೂ ಬಹಳ ಸುಲಭವಾಗಿ ಬಲೆಗೆ ಬೀಲಿಸುತ್ತಾರೆ.

ಸಿಂಹ ರಾಶಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಅವರಿರುವುದಕ್ಕಿಂತ ಭಿನ್ನ ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಎಂತಹ ದೊಡ್ಡ ಸುಳ್ಳನ್ನು ಕೂಡ ಹೇಳಲು ಹಿಂಜರಿಯುವುದಿಲ್ಲ ಎನ್ನಲಾಗುತ್ತದೆ. ಆದಾಗ್ಯೂ, ಇವರು ಸುಳ್ಳು ಹೇಳುವುದರಲ್ಲಿ ಅಷ್ಟು ಪರಿಣಿತರಲ್ಲದ ಕಾರಣ ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ.

ತುಲಾ ರಾಶಿ:  ಬಹಳ ಉದಾರ ಮನೋಭಾವದವರಾದ ತುಲಾ ರಾಶಿಯವರು ತಮ್ಮ ಮಾತುಗಳಿಂದ ಇತರರಿಗೆ ನೋವಾಗುತ್ತದೆ ಎಂದು ತಿಳಿದರೆ ಅಂತಹ ಸಂದರ್ಭದಲ್ಲಿ ಸುಳ್ಳು ಹೇಳುತ್ತಾರೆ. ಇವರು ತಮಗಾಗಿ ಸುಳ್ಳು ಹೇಳುವುದಕ್ಕಿಂತ ಇತರರಿಗಾಗಿ ಸುಳ್ಳು ಹೇಳುತ್ತಾರೆ.

ವೃಶ್ಚಿಕ ರಾಶಿ: ಈ ರಾಶಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.  ಸುಳ್ಳು ಹೇಳುವುದರಲ್ಲಿ ನಿಪುಣರಾಗಿರುವ ಇವರು ಸುಳ್ಳನ್ನು ಸತ್ಯವೆಂದು ಬಿಂಬಿಸುವುದರಲ್ಲೂ ಪರಿಣತಿಯನ್ನು ಹೊಂದಿರುತ್ತಾರೆ. ಆದರೆ, ಇವರು ಯಾವುದಾದರೂ ಬಲವಾದ ಕಾರಣವಿದ್ದಾಗಲಷ್ಟೇ ಸುಳ್ಳು ಹೇಳುತ್ತಾರೆ.

ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link