Astrology: ಬಹಳ ಸುಲಭವಾಗಿ ಜನರನ್ನು ತಮ್ಮತ್ತ ಸೆಳೆಯುತ್ತಾರೆ ಈ 5 ರಾಶಿಯ ಜನ
ಮಿಥುನ ರಾಶಿಯ ಅಧಿಪತಿ ಬುಧ. ಈ ರಾಶಿಯವರನ್ನು ವಾಕ್ ಸಮರದಲ್ಲಿ ಸೋಲಿಸುವುದು ಕಷ್ಟ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಇವರ ಮಾತಿನಲ್ಲಿ ಮ್ಯಾಜಿಕ್ ಇದ್ದು ಇವರು ಇತರರನ್ನು ಬಹಳ ಬೇಗ ಮೋಡಿ ಮಾಡುತ್ತಾರೆ ಎನ್ನಲಾಗುತ್ತದೆ.
ಸಿಂಹ ರಾಶಿಗೆ ಗ್ರಹಗಳ ರಾಜ ಸೂರ್ಯನೇ ಅಧಿಪತಿ. ಈ ರಾಶಿಯವರ ಧ್ವನಿಗೆ ಇತರರನ್ನು ನಡುಗಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಇವರ ಮಾತಿಗೆ ಎಂತಹವರೇ ಆದರೂ ಬಹಳ ಸುಲಭವಾಗಿ ತಲೆದೂಗುತ್ತಾರೆ ಎಂದು ಹೇಳಲಾಗುತ್ತದೆ.
ಗ್ರಹಗಳ ರಾಜಕುಮಾರನಾದ ಬುಧ ಕನ್ಯಾ ರಾಶಿಯ ಅಧಿಪತಿ ಆಗಿದ್ದಾರೆ. ಕನ್ಯಾ ರಾಶಿಯವರ ಸ್ವಭಾವಕ್ಕೆ ಎಂತಹವರೇ ಆದರೂ ಬೆಣ್ಣೆಯಂತೆ ಕರಾಗುತ್ತಾರೆ. ಇವರು ಎಂತಹ ಕಠಿಣ ಸವಾಲನ್ನೂ ಕೂಡ ಬಹಳ ಸುಲಭವಾಗಿ ಇತರರಿಗೆ ಅರ್ಥ ಮಾಡಿಸಬಲ್ಲ ಸಾಮರ್ಥ್ಯ ಹೊಂದಿರುತ್ತಾರೆ.
ಐಷಾರಾಮಿ ಜೀವನಕಾರಕನಾದ ಶುಕ್ರ ಈ ರಾಶಿಯ ಅಧಿಪತಿ. ತುಲಾ ರಾಶಿಯವರು ಎಂತಹುದ್ದೇ ಸಂದರ್ಭದಲ್ಲಿ ಯಾವುದೇ ವಿಚಾರದಲ್ಲಿ ತಮ್ಮ ಮಾತನ್ನು ಇತರರ ಮುಂದೆ ತುಂಬಾ ಸುಲಭವಾಗಿ ಪ್ರಸ್ತುತಪಡಿಸಿ, ಅವರ ಮನಸ್ಸನ್ನು ಗೆಲ್ಲುತ್ತಾರೆ. ಇವರಿಗೆ ಇವರ ಮಾತೇ ಬಂಡವಾಳ.
ದೇವಗುರು ಬೃಹಸ್ಪತಿಯನ್ನು ಧನು ರಾಶಿಯ ಅಧಿಪತಿ ಎಂದು ಹೇಳಲಾಗುತ್ತದೆ. ಈ ರಾಶಿಯವರ ಮಾತೇ ಮಧುರ. ಯಾರಿಗೇ ಆದರೂ ಅವರೊಂದಿಗೆ ಒಂದೆರಡು ಕ್ಷಣವಾದರೂ ಮಾತನಾಡಬೇಕು ಎಂಬ ಆಸೆ ಮೂಡುತ್ತದೆ. ಇವರ ಮಾತೇ ಕೆಲವರ ಸಮಸ್ಯೆಗಳಿಗೆ ಪರಿಹಾರ ಎಂತಲೂ ಬಣ್ಣಿಸಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.