Negative Energy Indications: ಮನೆಯಲ್ಲಿ ನೀವು ಮಾಡುವ ಈ ಕೆಲಸ ನಕಾರಾತ್ಮಕ ಶಕ್ತಿಗೆ ಬುಲಾವ್ ಕಳುಹಿಸಿದಂತೆ

Tue, 21 Jun 2022-10:21 pm,

ಪದೇ ಪದೇ ಮನೆಯ ಯಾವುದೇ ಸದಸ್ಯ ಅನಾರೋಗ್ಯಕ್ಕೆ ಒಳಗಾಗುವುದು, ಯಾವುದೇ ಮಾತುಗಳಿಲ್ಲದೆ ಮತಭೇದ ಉಂಟಾಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ, ಇದು ನಕಾರಾತ್ಮಕತೆಯ ಸೂಚಕವಾಗಿದೆ.  

ನಿಮಗೆ ಮನೆಯಲ್ಲಿ ಯಾವಾಗಲೂ ದಣಿದ ಅನುಭವ, ಪ್ರೇರಣಾಹೀನ ಮತ್ತು ಗೊಂದಲಕ್ಕೊಳಗಾದ ಅನುಭವ ಉಂಟಾಗುತ್ತಿದ್ದರೆ, ಅದು ಮನೆಯಲ್ಲಿ ಹೆಚ್ಚುತ್ತಿರುವ ನಕಾರಾತ್ಮಕತೆಯ ಸಂಕೇತವಾಗಿದೆ.. ಇಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಗಂಟೆ ಮತ್ತು ಶಂಖವನ್ನು ನಿಯಮಿತವಾಗಿ ಬಳಸಬೇಕು.  

ದೇವರ ನಾಮವನ್ನು ನಿಯಮಿತವಾಗಿ ಜಪಿಸುವ ಮನೆಗಳಲ್ಲಿ, ದೀಪಗಳನ್ನು ಬೆಳಗಿ, ಮಂತ್ರಗಳನ್ನು ಜಪಿಸುವ ಮನೆಗಳಲ್ಲಿ  ನಕಾರಾತ್ಮಕತೆ ಎಂದಿಗೂ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಭಗವಂತ ನೆಲೆಸಿರುವ ಮನೆಯಲ್ಲಿ ಋಣಾತ್ಮಕತೆ ದೂರದವರೆಗೆ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.  

ಮನೆಯ ಯಾವುದೇ ಮೂಲೆಯಲ್ಲಿಯೂ ಕೂಡ  ಕತ್ತಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಕೆಲಸದ ಸ್ಥಳ ಮತ್ತು ಕಚೇರಿ ಇತ್ಯಾದಿಗಳಲ್ಲಿ ದೀಪಗಳನ್ನು ಬೆಳಗಿಸಿ. ಈ ಜಾಗಗಳಲ್ಲಿ ದೀರ್ಘಕಾಲ ಕತ್ತಲೆಯಾಗಿ ಉಳಿಯುವುದು ನಕಾರಾತ್ಮಕತೆಗೆ ಕಾರಣವಾಗುತ್ತದೆ. ಆದ್ದರಿಂದ, ಮನೆ ಅಥವಾ ಕಚೇರಿಯ ಯಾವುದೇ ಮೂಲೆಯಲ್ಲಿ ಕತ್ತಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.  

ಯಾವಾಗಲು ಕೊಲೆಯಾಗಿರುವ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆದ್ದರಿಂದ ಮನೆ ಮತ್ತು ನಿಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಿ ಶುಚಿತ್ವ ಇರುತ್ತದೆಯೋ ಅಲ್ಲಿ ಋಣಾತ್ಮಕತೆಯಾಗಲೀ ಅಲಕ್ಷ್ಮಿಯಾಗಲೀ ನೆಲೆಸುವುದಿಲ್ಲ.  

ರಾತ್ರಿ ಸಮಯದಲ್ಲಿ ಸುಗಂಧಿ ದ್ರವ್ಯಗಳನ್ನು ಬಳಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಕಡೆಗೆ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ, ರಾತ್ರಿಯಲ್ಲಿ ಬಲವಾದ ಸುಗಂಧವನ್ನು ಬಳಸುವ ತಪ್ಪನ್ನು ಎಂದಿಗೂ ಮಾಡಬೇಡಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link