Ather Rizta: ಅತ್ಯಂತ ಕಡಿಮೆ ಬೆಲೆಗೆ ಈ ಫ್ಯಾಮಿಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿ

Mon, 10 Jun 2024-9:13 pm,

ಎಥರ್ ರಿಜ್ಟಾ ಫ್ಯಾಮಿಲಿ ಸ್ಕೂಟರ್ ಆಗಿದ್ದು, ಇದನ್ನು 450Xಗಿಂತ ಹೆಚ್ಚು ಪ್ರಾಯೋಗಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್‌ನಲ್ಲಿ ಸೌಕರ್ಯ, ಅನುಕೂಲತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆ ಇರುವಾಗಲೇ ಈ ಹೊಸ ಸ್ಕೂಟರ್ ಎಂಟ್ರಿ ಆಗಿದೆ. ಹೊಸದಾಗಿ ಬಿಡುಗಡೆಯಾಗಿರುವ ಎಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್ ರಿಜ್ಟಾ S, ರಿಜ್ಟಾ Z ಮತ್ತು ರಿಜ್ಟಾ Z (ಲಾಂಗ್ ರೇಂಜ್) ಎಂಬ 3 ರೂಪಾಂತರಗಳಲ್ಲಿ ಲಭ್ಯವಿದೆ. 

ಈ ಎಲೆಕ್ಟ್ರಿಕ್ ಸ್ಕೂಟರ್ 2.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು2.9kWh ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಮಾದರಿಯು 123KM ರೇಂಜ್ ಮತ್ತು 80KM ಟಾಪ್ ಸ್ಪೀಡ್ ಹೊಂದಿದೆ. ರಿಜ್ಟಾ S ರೂಪಾಂತರದ ಬೆಲೆಯು 1.09 ಲಕ್ಷ ರೂ.(ಎಕ್ಸ್ ಶೋರೂಂ)ವಾಗಿದೆ. ಈ ರೂಪಾಂತರವು ಪ್ಯಾಂಗೊಂಗ್ ಬ್ಲೂ, ಡೆಕ್ಕನ್ ಗ್ರೇ ಮತ್ತು ಸಿಯಾಚಿನ್ ವೈಟ್ ಎಂಬ 3 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 7-ಇಂಚಿನ ಸೆಗ್ಮೆಂಟ್ ಡಿಸ್ಪ್ಲೇ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ನಂತಹ ಫೀಚರ್ಸ್ ಹೊಂದಿವೆ.

ಈ ಎಥರ್ ರಿಜ್ಟಾ Z ರೂಪಾಂತರದ ಬೆಲೆಯು ಎಕ್ಸ್ ಶೋರೂಂ ಪ್ರಕಾರ 1.25 ಲಕ್ಷ ರೂ.ವಾಗಿದೆ. ಈ ರೂಪಾಂತರದ ಕಾರ್ಯಕ್ಷಮತೆ, ರೇಂಜ್ & ಚಾರ್ಜಿಂಗ್ ರಿಜ್ಟಾ Sಗೆ ಹೋಲುತ್ತದೆ, ಆದರೆ ಇದು 7 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮಾದರಿಯು 7-ಇಂಚಿನ LCD ಡಿಸ್ಪ್ಲೇ ಮತ್ತು ಪ್ರೊ ಪ್ಯಾಕ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಪ್ರೊ ಪ್ಯಾಕ್‌ನ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ಅಥರ್ ರಿಜ್ಟಾ Sನಲ್ಲಿ ಕಾಣೆಯಾಗಿರುವ ಮೇಲಿನ ಎಲ್ಲಾ ವೈಶಿಷ್ಟ್ಯಗಳನ್ನು ರಿಜ್ಟಾ Z ರೂಪಾಂತರದಲ್ಲಿ ಕಂಡುಬರುತ್ತವೆ. ಸ್ಮಾರ್ಟ್‌ಇಕೋ ಮೋಡ್, ಬ್ಲೂಟೂತ್ ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್, ಆಟೋ ಹೋಲ್ಡ್, ಫಾಲ್ ಸೇಫ್, ಆಟೋ ಇಂಡಿಕೇಟರ್ ಕಟ್-ಆಫ್, ESS ಮುಂತಾದ ಇನ್ನಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಗೂಗಲ್ ಮ್ಯಾಪ್, ಲೈವ್- ಚಾರ್ಜಿಂಗ್ ಸ್ಥಿತಿ, ಅಲೆಕ್ಸಾ ಮುಂತಾದವುಗಳನ್ನು ಹೊಂದಿದೆ.

ಕೊನೆಯದಾಗಿ ಎಥರ್ ರಿಜ್ಟಾ Z (ಲಾಂಗ್ ರೇಂಜ್) ರೂಪಾಂತರವು 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬಂದಿದೆ. ಇದು 160KM ರೇಂಜ್ ಅನ್ನು ನೀಡುತ್ತದೆ. ಈ ಮಾದರಿಯು ಶೇ.80ರಷ್ಟು ಚಾರ್ಜ್ ಆಗಲು ಈಗ ದೊಡ್ಡ ಬ್ಯಾಟರಿ ಪ್ಯಾಕ್ ಹೊರತಾಗಿಯೂ ಕೇವಲ 4 ಗಂಟೆ ಮತ್ತು 30 ನಿಮಿಷ ತೆಗೆದುಕೊಳ್ಳುತ್ತದೆ. ಈ ಟಾಪ್ ರಿಜ್ಟಾ Z (ಲಾಂಗ್ ರೇಂಜ್) ರೂಪಾಂತರದ ಬೆಲೆಯು 1.45 ಲಕ್ಷ ರೂ. (ಎಕ್ಸ್-ಶೋ ರೂಂ) ಆಗಿದೆ. ಈ ಎಲ್ಲಾ ರೂಪಾಂತರಗಳು 3-ವರ್ಷ/30,000km ಸ್ಕೂಟರ್ ಮತ್ತು ಬ್ಯಾಟರಿ ವಾರಂಟಿಯೊಂದಿಗೆ ಬರುತ್ತವೆ. ಎಥರ್ ಬ್ಯಾಟರಿ ಪ್ರೊಟೆಕ್ಟ್‌ನೊಂದಿಗೆ ಗ್ರಾಹಕರು ತಮ್ಮ ಬ್ಯಾಟರಿ ವಾರಂಟಿಯನ್ನು 5-ವರ್ಷ/60,000kmಗೆ ಹೆಚ್ಚಿಸಬಹುದಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link