Auspicious Plants: ಹಣಕಾಸಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಸಸ್ಯಗಳು, ಪಿತೃದೋಷದಿಂದಲೂ ಕೂಡ ಮುಕ್ತಿ ಸಿಗುತ್ತದೆ
1. ಅಗಸ್ತ್ಯ ಸಸ್ಯ (Agastya Plant) - ಅಗಸ್ತ್ಯ ಸಸ್ಯ ಪಿತೃದೋಷ ನಾಶಕ. ಈ ಸಸ್ಯವನ್ನು ಸುಲಭವಾಗಿ ಕಂಡುಹಿಡಿಯಲಾಗುವುದಿಲ್ಲ. ಕಷ್ಟಪಟ್ಟು ಒಂದು ಎಲೆ ಈ ಸಸ್ಯ ನಿಮಗೆ ದೊರೆತರ, ಅದನ್ನು ಖಂಡಿತವಾಗಿಯೂ ಮನೆಯಲ್ಲಿ ನೆಡಬೇಕು. ಬಿಳಿ ಮತ್ತು ನಸುಗೆಂಪು ಬಣ್ಣದ ಅಗಸ್ತ್ಯ ಹೂವುಗಳು ನೋಡಲು ಚೆನ್ನಾಗಿರುವುದಲ್ಲದೆ, ಇವು ದೇವಿ ಲಕುಮಿಗೂ ಕೂಡ ಪ್ರಿಯವಾಗಿರುತ್ತವೆ.
2. ಮಯೂರ ಶಿಖಾ ಸಸ್ಯ (Mayurshikha Plant) - ವಾಸ್ತುವಿನ ದೃಷ್ಟಿಯಿಂದ ಮಯೂರ ಶಿಖಾ ಸಸ್ಯವನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಸುಲಭವಾಗಿ ಸಿಗುತ್ತದೆ. ಈ ಸಸ್ಯದ ಪ್ರಭಾವದಿಂದ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ತೊಲಗುತ್ತದೆ. ಇದಲ್ಲದೆ, ಈ ಸಸ್ಯವನ್ನು ದುಷ್ಟಶಕ್ತಿಗಳ ನಾಶಕ ಎಂದೂ ಕರೆಯುತ್ತಾರೆ. ಈ ಸಸ್ಯದ ಹೂವುಗಳು ನವಿಲಿನ ತುರಾಯಿಯಂತೆ ಇರುತ್ತವೆ. ಪೀಕಾಕ್ ಕ್ರೆಸ್ಟ್ ಸಸ್ಯವನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನೆಡಬಹುದು.
3. ಪಿತೃದೋಷ ಪರಿಹಾರಕ (Plants Remove Pitru Dosh) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃದೋಷವನ್ನು ಮಹಾದೋಷ ಎಂದು ಪರಿಗಣಿಸಲಾಗಿದೆ. ಪಿತೃದೋಷ (Pitru Dosh Upay) ಪೀಡಿತ ಜಾತಕದ ವ್ಯಕ್ತಿಗಳಿಗೆ ಅಭಿವೃದ್ಧಿಯಲ್ಲಿ ಹಲವು ತೊಡಕುಗಳು ಎದುರಾಗುತ್ತವೆ. ಇದಲ್ಲದೆ ನೌಕರಿ ಹಾಗೂ ಕೆಲಸದಲ್ಲಿಯೂ ಕೂಡ ಪ್ರಗತಿ ಕುಂಠಿತಗೊಳ್ಳುತ್ತದೆ. ಹೀಗಿರುವಾಗ ಪಿತೃದೋಷದಿಂದ ಪಾರಾಗಲು ಈ ಸಸ್ಯಗಳನ್ನು ಮನೆಯ ಅಕ್ಕಪಕ್ಕದಲ್ಲಿ ನೆಡುವುದು ತುಂಬಾ ಸೂಕ್ತ.
4. ಶಮಿಗಿಡ (Shami Plant) - ವಾಸ್ತು ದೋಷಗಳನ್ನು ನಿವಾರಣೆಗೆ ಶಮಿ ಗಿಡ ಬಹಳ ವಿಶೇಷವಾಗಿದೆ. ಶನಿ ದೇವ ಈ ಸಸ್ಯಕ್ಕೆ ಸಂಬಂಧಿಸಿದ್ದಾನೆ. ಈ ಗಿಡ ನೆಟ್ಟ ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಶಕ್ತಿಯ ಪ್ರವೇಶ ಇರುವುದಿಲ್ಲ. ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ಶಮಿ ಗಿಡವನ್ನು ಇಡುವುದು ತುಂಬಾ ಶುಭಕರ.
5. ಸಸ್ಯವನ್ನು ನೆಡುವ ಸರಿಯಾದ ದಿಕ್ಕು - ವಾಸ್ತು (Vastu Tips) ಪ್ರಕಾರ ಮನೆಯ ಪೂರ್ವ, ಉತ್ತರ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗಿಡಗಳನ್ನು ನೆಡುವುದು ಶುಭ. ಮತ್ತೊಂದೆಡೆ, ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ದೊಡ್ಡ ಗಿಡಗಳನ್ನು ನೆಡುವುದು ಯಾವಾಗಲೂ ಒಳ್ಳೆಯದು.