ರಾಯಲ್ ಟ್ರೈನ್ `ಪ್ಯಾಲೇಸ್ ಆನ್ ವೀಲ್ಸ್` ಅನ್ನು 1 ಕೋಟಿ 30 ಲಕ್ಷಕ್ಕೆ ಬುಕ್ ಮಾಡಿದ ಆಸ್ಟ್ರೇಲಿಯಾ ಪ್ರವಾಸಿಗರು

Thu, 20 Sep 2018-1:47 pm,

ಪ್ಯಾಲೆಸ್ ಆನ್ ವೀಲ್ಸ್ ಜನವರಿ 26, 1983ರಲ್ಲಿ ಪ್ರಾರಂಭವಾಯಿತು. ಪ್ಯಾಲೆಸ್ ಆನ್ ವೀಲ್ಸ್‌ನ ಪರಿಕಲ್ಪನೆಯು ಐಶಾರಾಮಿ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. ಈ ರೈಲನ್ನು ಹಿಂದಿನ ಆಡಳಿತಗಾರರಾದ ರಾಜಪುತಾನ, ಗುಜರಾತ್, ಹೈದರಾಬಾದಿನ ನಿಜಾಮರವರ ವೈಯಕ್ತಿಕ ರೈಲ್ವೆ ಭೋಗಿಗಳ ಆಧಾರದಮೇರೆಗೆ ತಯಾರಿಸಲಾಗಿದೆ. ಪ್ಯಾಲೇಸ್ ಆನ್ ವೀಲ್ಸ್ನ ಇತಿಹಾಸದಲ್ಲೇ ಮೊದಲ ಬಾರಿಗೆ 41 ಸೊಲೊ ಟೂರಿಸ್ಟ್ ಈ ಐಷಾರಾಮಿ ರೈಲಿನ 82 ಸೀಟುಗಳನ್ನು ಬುಕ್ ಮಾಡಿದೆ.

ಏಳು ದಿನಗಳ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಪ್ರವಾಸಿಗರು ಇಡೀ ರೈಲುವನ್ನು 1 ಕೋಟಿ 30 ಲಕ್ಷಗಳಿಗೆ ಬುಕ್ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಪ್ರಯಾಣಿಕರೂ ತಮ್ಮ ಏಕೈಕ ಪ್ರಯಾಣಕ್ಕಾಗಿ ಡಬಲ್ ಬೆಡ್ ರೂಮ್ ಕ್ಯಾಬಿನ್ಗಾಗಿ ಬುಕ್ ಮಾಡಿದ್ದು ದುಪ್ಪಟ್ಟು ಬಾಡಿಗೆ ನೀಡಿದ್ದಾರೆ.  

ಈ ರೈಲು 7 ರಾತ್ರಿ ಮತ್ತು 8 ದಿನಗಳ ಪ್ರಯಾಣವನ್ನು ಜನರಿಗೆ ಒದಗಿಸುತ್ತದೆ.  ದಿನ 1- ನವ ದೆಹಲಿಯಿಂದ ಆರಂಭವಾಗುತ್ತದೆ,  ದಿನ 2- ಜೈಪುರ್,  ದಿನ 3- ಸಾವಾಯಿ, ಮದೋಪುರ, ಚಿತ್ತುರ್ಗರ್ಹ,  ದಿನ 4- ಉದಯಪುರ,  ದಿನ 5- ಜೈಸಲ್ಮೇರ್,  ದಿನ 6- ಜೋದಪುರ,  ದಿನ 7- ಭರತ‌ಪುರ, ಆಗ್ರ,  ದಿನ 8- ನವ ದೆಹಲಿಗೆ ಹಿಂತಿರುಗುತ್ತದೆ.

ಈ ರೈಲು ಪ್ರವಾಸಿ ತಾಣಗಳನ್ನು ಮುಟ್ಟುವುದರ ಜೊತೆಗೆ ಹಲವಾರು ಸೌಲಭ್ಯಗಳು ಎಂದರೆ ಸ್ಪಾ, ಜಿಮ್, ಬಾರ್, ರಾಯಲ್ ಹಾಸಿಗೆ, ಪಾರ್ಲರ್ ಮತ್ತು ರಾಯಲ್ ಪರಿಸರಕ್ಕೆ ಎಲ್ಲವನ್ನೂ ಹೊಂದಿದೆ. ಪ್ರತಿ ಸಲೂನ್ ಪೀಠೋಪಕರಣ, ಕರುಕುಶಲ, ಚಿತ್ರಕಲೆ ಬಳಕೆಯಿಂದ ನಿರೂಪಿಸಲಾಗಿದೆ. ಈ ರೈಲು ಬಹುಪಾಲು ಸಾಂಸ್ಕ್ರತಿಕ ಲಕ್ಷಣವನ್ನೇ ತೋರಿಸುತ್ತದೆ. ದೆಹಲಿ ಮೂಲದ ವಿನ್ಯಾಸಕಾರಳಾದ ಮೋನಿಕಾ ಖನ್ನಾ‌ರವರು ರೈಲಿನ ಒಳಾಂಗಣವನ್ನು ಚಿತ್ರಿಸಿದ್ದಾರೆ.

ರೈಲಿನಲ್ಲಿ 23 ಭೋಗಿಗಳಿವೆ. ಇದರಲ್ಲಿ ಒಂದುಬಾರಿಗೆ 104 ಪ್ರವಾಸಿಗರು ಪ್ರವಾಸ ಮಾಡಬಹುದು. ಪ್ರತಿಯೊಂದು ಭೋಗಿಗೂ ಮಾಜಿ ರಜಪೂತರ ಹೆಸರಿಡಲಾಗಿದೆ. ಅವುಗಳೆಂದರೆ ಆಲ್ವಾರ್, ಭರತ್ಪುರ್, ಬಿಕನೆರ್, ಬುಂದಿ, ಧೋಲ್ಪುರ್, ಜೈಸಲ್ಮೇರ್, ಜೈಪುರ್, ಜಲಾವರ್, ಉದಯಪುರ್, ಕೋಟ, ಸಿರೋಹಿ, ಜೋದಪುರ್, ಕಿಶನ್‌ಘರ್. ಪ್ರತಿ ಭೋಗಿಗಳಲ್ಲಿ 4 ಕೋಣೆಗಳಿವೆ. ಈ ಕೋಣೆಗಳಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆಗೆ ವೈಫೈ ಸಂಪರ್ಕವೂ ಇದೆ. ಈ ರೈಲುನಲ್ಲಿ ರಾಜಸ್ತಾನಿ ಪರಿಸರವನ್ನು ಒಳಗೊಂಡಿರುವಂತಹ ಮಹಾರಾಜ ಮತ್ತು ಮಹಾರಾಣಿ ಎನ್ನುವ ಹೆಸರಿನಲ್ಲಿ ಎರಡು ರೆಸ್ಟೋರೆಂಟುಗಳಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link