ದೈನಂದಿನ ಡಯಟ್‌ನಲ್ಲಿ ಈ ಆಯುರ್ವೇದ ಪಾನೀಯಗಳನ್ನು ಸೇರಿಸಿ, ಹಾರ್ಟ್ ಬ್ಲಾಕೇಜ್‌ಗೆ ಹೇಳಿ ಗುಡ್ ಬೈ!
ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಾರ್ಟ್ ಬ್ಲಾಕೇಜ್ ಸಮಸ್ಯೆಯಿಂದ ಪರಿಹಾರ ಪಡೆಯಲು ಆಯುರ್ವೇದದ ಕೆಲವು ಪಾನೀಯಗಳು ತುಂಬಾ ಪ್ರಯೋಜನಕಾರಿ.
ತ್ರಿಫಲದ ಉತ್ಕರ್ಷಣ ನಿರೋಧಕ ವೈಶಿಷ್ಟ್ಯವು ಅಪಧಮನಿಯ ಉರಿಯೂತವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಹಾಗಾಗಿ ನಿಮ್ಮ ಡಯಟ್‌ನಲ್ಲಿ ತ್ರಿಫಲ ಟೀ ಸೇರಿಸುವುವುದರಿಂದ ರಕ್ತಪರಿಚಲನೆ ಸರಾಗವಾಗುತ್ತದೆ.
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ, ನಿಂಬೆಹಣ್ಣಿನ ರಸವನ್ನು ಬೆರೆಸಿ ಟೀ ತಯಾರಿಸಿ ಕುಡಿಯುವುದರಿಂದ ಇದು ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದಾಲ್ಚಿನ್ನಿ ಮತ್ತು ಅರಿಶಿನ ಎರಡೂ ಕೂಡ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ಇವುಗಳನ್ನು ಬೆಚ್ಚಗಿನ ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
ಮಧುಮೇಹಕ್ಕೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುವ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಈ ನೀರನ್ನು ಕುಡಿಯುವುದರಿಂದ ನಿರ್ಬಂಧಿತ ಅಪಧಮನಿಗಳನ್ನು ಸ್ವಚ್ಛಗೊಳಿಸಲು ಇದು ಸಹಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.