ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿ ಡೊಳ್ಳು ಹೊಟ್ಟೆಯನ್ನು ಸ್ಲಿಮ್ ಆಗಿಸಬಲ್ಲ ಮಾಂತ್ರಿಕ ಆಹಾರಗಳಿವು!
ಆಯುರ್ವೇದದ ಪ್ರಕಾರ, ಅಡುಗೆ ಮನೆಯಲ್ಲಿ ಬಳಸುವ ಕೆಲವು ಪದಾರ್ಥಗಳು ತೂಕ ಇಳಿಕೆಗೆ, ಅದರಲ್ಲೂ ಡೊಳ್ಳು ಹೊಟ್ಟೆಯನ್ನು ಕರಗಿಸಲು ಪ್ರಮುಖ ಪಾತ್ರವಹಿಸುತ್ತವೆ. ಆಯುರ್ವೇದದಲ್ಲಿ ಈ ಆಹಾರಗಳನ್ನು ಮೇದೋಹರ್ (ಅಂದರೆ ಕೊಬ್ಬು ಸುಡುವುದು) ಎಂದು ಉಲ್ಲೇಖಿಸಲಾಗಿದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಜೇನನ್ನು ಅತ್ಯುತ್ತಮ ಕೊಬ್ಬು ಬರ್ನರ್ ಎಂದು ಉಲ್ಲೇಖಿಸಲಾಗಿದೆ. ರುಚಿಯಲ್ಲಿ ಸಿಹಿಯಾಗಿರುವ 1 ಸ್ಪೂನ್ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಬೆಲ್ಲಿ ಫ್ಯಾಟ್ ಸುಲಭವಾಗಿ ಕರಗುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ಗಂಜಿ/ ಬಾರ್ಲಿ ನೀರನ್ನು ಕುಡಿಯುವುದರಿಂದ ಇದು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಕಾರಿ. ಜೊತೆಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸುಡುವ ಮೂಲಕ ಡೊಳ್ಳು ಹೊಟ್ಟೆಯನ್ನು ಚಪ್ಪಟೆಯಾಗಿಸಲು ನೆರವಾಗುತ್ತದೆ.
ಸ್ವಭಾವತಃ ನಿರ್ವಿಷಕಾರಿಯಾದ ಅರಿಶಿನವನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಲಾಭದಾಯಕ. ಅರ್ಧ ಸ್ಪೂನ್ ಅರಿಶಿನವನ್ನು ಸಮಪ್ರಮಾಣದ ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಹೊಟ್ಟೆಯ ಫ್ಯಾಟ್ ಕರಗುತ್ತದೆ.
ವಾತ, ಪಿತ್ತ ಮತ್ತು ಕಫವನ್ನು ಸಮತೋಲನಗೊಳಿಸುವ ನೆಲ್ಲಿಕಾಯಿಯ ಪುಡಿಯನ್ನು 1 ಸ್ಪೂನ್ ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದರಿಂದ ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗುತ್ತದೆ.
ದಿನಕ್ಕೆ ಒಂದೆರಡು ಬಾರಿ ಶುಂಠಿ ಟೀ ಕುಡಿಯುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಕೆಗೂ ಸಹಕಾರವನ್ನು ನೀಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.