ಬಿಳಿ ಕೂದಲಿಗೆ ಪರ್ಮನೆಂಟ್ ಪರಿಹಾರ ಈ ಹಳದಿ ಹಣ್ಣಿನ ಹೇರ್ ಮಾಸ್ಕ್
ಬಾಳೆಹಣ್ಣಿನಲ್ಲಿ ಕೂದಲಿಗೆ ಅಗತ್ಯವಿರುವ ಅನೇಕ ಪೋಷಕಾಂಶಗಳಿವೆ. ಹಾಗಾಗಿ ಇದನ್ನು ಹೇರ್ ಮಾಸ್ಕ್ ಆಗಿಯೂ ಬಳಸಬಹುದು ಎನ್ನುತ್ತಾರೆ ಬ್ಯೂಟಿಷಿಯನ್ ಗಳು.
ಈ ಕೂದಲಿನ ಮಾಸ್ಕ್ ತಯಾರಿಸಲು, ಮೊದಲು ನೀವು ಬಾಳೆಹಣ್ಣುಗಳ ಮಿಶ್ರಣವನ್ನು ಮಾಡಬೇಕಾಗುತ್ತದೆ.
ಇದಕ್ಕೆ ಒಂದು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಕೂದಲಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ವಾಶ್ ಮಾಡಿ.
ಬಾಳೆಹಣ್ಣಿನ ಮಾಸ್ಕ್‌ನಿಂದ ಕೂದಲು ಬುಡದಿಂದ ಕಪ್ಪಾಗುತ್ತದೆ ಅಲ್ಲದೇ, ತುದಿ ಹಾಳಾಗುವುದಿಲ್ಲ. ಇದಲ್ಲದೆ, ಕೂದಲು ಹೊಳಪನ್ನು ಪಡೆಯುತ್ತದೆ.
ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.