ಬಾಳೆಹಣ್ಣಿ ಮಾಸ್ಕ್... ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ!

Mon, 05 Feb 2024-12:38 pm,

ಅನೇಕ ಜನರು ಕೂದಲಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಿಳಿಕೂದಲು, ಒಣ ಕೂದಲು, ಕೂದಲು ಉದುರುವಿಕೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ. ಅಡುಗೆಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳೊಂದಿಗೆ ನಿಮ್ಮ ಕೂದಲಿನ ಆರೋಗ್ಯ ಕಾಪಾಡಬಹುದು. 

ಬಾಳೆಹಣ್ಣು ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದು ಹಾನಿಗೊಳಗಾದ ಕೂದಲಿಗೆ ಚಿಕಿತ್ಸೆ ನೀಡುತ್ತದೆ. 

ಬಾಳೆಹಣ್ಣಿನೊಂದಿಗೆ ಮೊಟ್ಟೆ ಮತ್ತು ಮೊಸರು ಬಳಸಿ ಮಾಡಿದ ಹೇರ್ ಮಾಸ್ಕ್ ಕೂದಲು ಉದುರುವಿಕೆಗೆ ರಾಮಾಬಾಣ. 

ಬಾಳೆಹಣ್ಣು ಮತ್ತು ತೆಂಗಿನೆಣ್ಣೆ ಮಾಸ್ಕ್ ಅನ್ನು ತಯಾರಿಸಿ, ಬಳಸಿ. ಒಣ ಕೂದಲಿಗೆ ಇದು ಉತ್ತಮ ಮನೆಮದ್ದು. 

ಬೆಣ್ಣೆ, ಮೊಟ್ಟೆ ಮತ್ತು ಆಲಿವ್ ಆಯಿಲ್‌ನೊಂದಿಗೆ ಬಾಳೆಹಣ್ಣನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. 

ಈ ಹೇರ್ ಮಾಸ್ಕ್ ಅನ್ನು ಹಚ್ಚಿದ ಮೇಲೆ 20 ನಿಮಿಷಗಳ ಕಾಲ ಬಿಟ್ಟು, ನಂತರ ತೊಳೆಯಿರಿ. ವಾರಕ್ಕೊಮ್ಮೆ ಈ ರೀತಿ ಮಾಸ್ಕ್ ಹಾಕಿಕೊಂಡರೆ ಕೂದಲು ಆರೋಗ್ಯಕರವಾಗಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link