ಬಿಸಿ ನೀರಿಗೆ ಈ ಬೀಜಗಳನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕರಗಿ ಹೋಗುತ್ತದೆ!!

Sat, 16 Nov 2024-1:00 pm,

Sabja seeds For bellyfat: ನಮ್ಮ ಜೀವನ ಶೈಲಿಯ ಕಾರಣದಿಂದಾಗಿ ಹಲವು ಸಮಸ್ಯೆಗಳು ನಮ್ಮ ದೇಹವನ್ನು ಆವರಿಸಿಕೊಳ್ಳುತ್ತವೆ, ಅವುಗಳಲ್ಲಿ ಹೊಟ್ಟೆಯ ಬೊಜ್ಜು ಕೂಡ ಒಂದು, ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನ ಶೈಲಿ ನಿಮ್ಮ ಹೊಟ್ಟೆಯ ಕೊಬ್ಬನ್ನು ಹೆಚ್ಚು ಮಾಡುತ್ತದೆ.   

ನಾವು ದಿನವೂ ಪಾನಿಯಾಗಳನ್ನು ಸೇವಿಸುವ ಅಭ್ಯಾಸವನ್ನು ಹೊಂದಿರುತ್ತೇವೆ, ಆದರೆ ಕೆಲವೊಂದು ಆರೋಗ್ಯಕರ ಪಾನಿಯಾಗಳ ಸೇವನೆ ತುಂಬಾ ಮುಖ್ಯ. ಈ ಪಾನಿಯಾಗಳು ನಮ್ಮನ್ನು ಆರೋಗ್ಯವಾಗಿಡುವುದಷ್ಟೆ ಅಲ್ಲದೆ ನಮ್ಮ ಹೊಟ್ಟಯ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.   

ಈ ಪಾನಿಯಾಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ, ಅಷ್ಟೆ ಅಲ್ಲ ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ನೀಡುವ ಪಾನಿಯಾಗಳು ಎಂದೆ ಹೇಳಬಹುದು.   

ಅಷ್ಟಕ್ಕೂ ಆ ಪಾನಿಯಾ ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆಯಾ..? ಹಾಗಾದರೆ ಈ ಪಾನಿಯಾವನ್ನು ತಯಾರಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...  

ಒಂದು ಲೋಟದಲ್ಲಿ ಬಿಸಿ ನೀರನ್ನು ತೆಗೆದುಕೊಳ್ಳಿ, ಇದಕ್ಕೆ ಸಬ್ಜಾ ಬೀಜಗಳನ್ನು ಬೆರಸಿ, ಅದಕ್ಕೆ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.   

ಈ ರೀತಿ ತಯಾರಿಸಿದ ನೀರನ್ನು ಅರ್ಧ ಗಂಟೆಯ ಕಾಲ ನೆನೆಯಲು ಬಿಡಿ, ಈ ರೀತಿ ತಯಾರಿಸಿದ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ, ಇದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಬೇಗನೆ ಕರಗುತ್ತದೆ.  

ನಿಯಮಿತವಾಗಿ ಈ ಪಾನಿಯಾವನ್ನು ಸೇವಿಸುವುದರಿಂದ ನೀವು ಶೀಘ್ರವೇ ಉತ್ತಮ ಫಲಿತಾಂಶವನ್ನು ಕಾಣಬಹುದು.   

ಈ ಪಾನೀಯವನ್ನು ನೇರವಾಗಿ ಕುಡಿಯಲು ಸಾಧ್ಯವಾಗದಿದ್ದರೆ, ನಿಮಗಿಷ್ಟವಾದ ಹಣ್ಣಿನ ಜ್ಯೂಸ್‌ನೊಂದಿಗೆ ಇದನ್ನು ನೀವು ಬೆರಸಿ ಕುಡಿಯಬಹುದು. ಆದರೆ, ನೀವು ಯಾವ ಹಣ್ಣಿನ ಜ್ಯೂಸ್‌ ಸೇವಿಸಿದರೂ, ಇದಕ್ಕೆ ಸಕ್ಕರೆ ಸೇರಿಸುವಂತಿಲ್ಲ.   

ಜ್ಯೂಸ್‌ ಅಷ್ಟೆ ಅಲ್ಲ ನೀವು ಈ ಸಬ್ಜಾ ಬೀಜದ ರಸವನ್ನು ಸ್ಮೂಥಿಯಲ್ಲಿ ಕೂಡ ಬೆರೆಸಿ ಕುಡಿಬಹುದು. ಇದರಲ್ಲಿರುವ ಎಲ್ಲಾ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು.   

ಈ ಪಾನಿಯಾವನ್ನು ನೀವು ಬೆಚ್ಚಗೆ ಕುಡಿದರೆ ಮಾತ್ರ ಇದರ ಫಲಿತಾಂಶವನ್ನು ನೀವು ಪಡೆಯಬಹುದು.   

ಕೇವಲ ಪಾನೀಯವನ್ನು ಕುಡಿದರೆ ಹೊಟ್ಟೆ ಕಡಿಮೆಯಾಗುವುದಿಲ್ಲ. ಉತ್ತಮ ಆರೋಗ್ಯಕರ ಜೀವನಶೈಲಿಯನ್ನು ಖಂಡಿತವಾಗಿಯೂ ಅನುಸರಿಸಬೇಕು. ವ್ಯಾಯಾಮ, ಆರೋಗ್ಯಕರ ಆಹಾರವನ್ನು ಹೊಟ್ಟೆಯ ಬೊಜ್ಜು ಕರಗಿಸಲು ತುಂಬಾ ಮುಖ್ಯ.   

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link