ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ಅದನ್ನು ನೈಸರ್ಗಿಕ ರೀತಿಯಲ್ಲಿ ಪರಿಹರಿಸಿಕೊಳ್ಳಬಹುದು.ಈ ಮೂಲಕ ಕೀಲು ನೋವಿನಿಂದಲೂ ಮುಕ್ತಿ ಪಡೆಯುವುದರ ಜೊತೆಗೆ ಕಿಡ್ನಿ ಆರೋಗ್ಯವನ್ನು ಕೂಡಾ ಕಾಪಾಡಬಹುದು.
ಈ ನೈಸರ್ಗಿಕ ಪರಿಹಾರಗಳಲ್ಲಿ ಪಲಾವ್ ಎಲೆ ಕೂಡಾ ಒಂದು.ದೇಹದಲ್ಲಿ ಸಂಗ್ರಹವಾಗಿರುವ ಅಧಿಕ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕಲು ಇದು ಪ್ರಯೋಜನಕಾರಿಯಾಗಿದೆ.ಅಲ್ಲದೆ ಸಂಧಿವಾತ ಸಂಬಂಧಿತ ಸಮಸ್ಯೆಗಳನ್ನು ಕೂಡಾ ಇದು ನಿವಾರಿಸುತ್ತದೆ.
ಈ ಎಲೆಗಳು ವಿಟಮಿನ್ ಸಿ, ಎ ಮತ್ತು ಫೋಲಿಕ್ ಆಸಿಡ್ ಅನ್ನು ಹೇರಳವಾಗಿ ಹೊಂದಿರುತ್ತವೆ. ದೇಹದಲ್ಲಿ ಯೂರಿಕ್ ಆಸಿಡ್ ಗಮನಾರ್ಹವಾಗಿ ಹೆಚ್ಚಾದರೆ ಪಲಾವ್ ಎಲೆಗಳನ್ನು ಬಳಸುವುದು ಆರೋಗ್ಯಕರ ಆಯ್ಕೆ.
ಒಂದು ಕಪ್ ನೀರಿನಲ್ಲಿ ಅರ್ಧ ಟೀ ಚಮಚ ಚಹಾ ಪುಡಿ ಮತ್ತು 1 ರಿಂದ 2 ಪಲಾವ್ ಎಲೆ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಕುಡಿಯಿರಿ.
ಪಲಾವ್ ಎಲೆಯ ಕಷಾಯ ಮಾಡಿ ಕುಡಿಯಬಹುದು. ಇದಕ್ಕಾಗಿ 1 ಕಪ್ ನೀರಿನಲ್ಲಿ 2 ಪಲಾವ್ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಅದನ್ನು ಫಿಲ್ಟರ್ ಮಾಡಿ. ಈ ಕಷಾಯವನ್ನು ಬಿಸಿ ಇರುವಾಗಲೇ ಕುಡಿಯಬೇಕು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.