BBK 11: ಮಿಡ್ ವೀಕ್ ಎಲಿಮಿನೇಷನ್ ಮೂಲಕ ಒಂದೇ ದಿನ ಮೂವರು ಹೊರ ಹೋಗ್ತಾರಾ? ಬಿಗ್‌ಬಾಸ್ ರಣತಂತ್ರ ಏನು?
ಬಿಗ್ ಬಾಸ್ ಮುಗಿಯುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ. ಫೈನಲ್ ಹಂತಕ್ಕೆ ಬರುತ್ತಿದ್ದಂತೆಯೇ ಆಟದ ಗತಿಯೇ ಬದಲಾಗುತ್ತಿದೆ. ದಿನಗಳು ಉರುಳಿದಂತೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಒಬ್ಬರಾದ ಮೇಲೆ ಒಬ್ಬರಂತೆ ಹೊರಹೋಗುತ್ತಿದ್ದಾರೆ. ಬಿಗ್ ಬಾಸ್ 100ನೇ ದಿನ ಕಂಪ್ಲೀಟ್ ಆಗಿದ್ದು, ಇನ್ನೂ ಕೇವಲ ಎರಡು ವಾರ ಮಾತ್ರ ಬಾಕಿ ಇದೆ. ಸದ್ಯ ಬಿಗ್ ಬಾಸ್ ಮನೆಯಲ್ಲಿರುವ 10 ಜನರ ಪೈಕಿ ಈ ವಾರ ಐಶ್ವರ್ಯ ಸಿಂಧೋಗಿ ನಾಮಿನೇಟ್ ಆಗಿ ಹೊರಹೋಗಿದ್ದಾರೆ ಎನ್ನಲಾಗಿದೆ.
ಐಶ್ವರ್ಯ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ ಬಳಿಕ ಉಳಿದುಕೊಳ್ಳುವುದು ಒಂಬತ್ತು ಜನರು ಮಾತ್ರ. ಆದರೆ ಬಿಗ್ ಬಾಸ್ ಇನ್ನೂ ಕೇವಲ ಎರಡು ವಾರ ಮಾತ್ರ ಬಾಕಿ ಉಳಿದುಕೊಂಡಿದೆ. ಗ್ರ್ಯಾಂಡ್ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಎಲ್ಲಾ ಸ್ಪರ್ಧಿಗಳು ಹೈ ಅಲರ್ಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದಾರೆ. ಈ ಪೈಕಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮೂವರು ಸ್ಪರ್ಧಿಗಳಿಗೆ ಶಾಕ್ ನೀಡಲು ಬಿಗ್ ಬಾಸ್ ರಣತಂತ್ರ ರೂಪಿಸಲಿದ್ದಾರಾ? ಅನ್ನೋ ಪ್ರಶ್ನೆ ಮೂಡಿದೆ.
ಬಿಗ್ ಬಾಸ್ ಇತಿಹಾಸದಲ್ಲಿಯೇ ಒಂದು ಬಾರಿಯೂ ಮೂವರು ಸ್ಪರ್ಧಿಗಳನ್ನು ಎಲಿಮಿನೇಷನ್ ಮೂಲಕ ಹೊರ ಕಳುಹಿಸಿಲ್ಲ. ಆದರೆ ಈ ಬಾರಿ ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮೂವರಿಗೆ ಬಿಗ್ ಬಾಸ್ ಶಾಕ್ ನೀಡುತ್ತಾರೆ ಎನ್ನಲಾಗಿದೆ. ಎರಡೇ ವಾರ ಬಾಕಿ ಇರುವುದರಿಂದ ಸದ್ಯ ಮನೆಯಲ್ಲಿರುವ 9 ಸ್ಪರ್ಧಿಗಳ ಪೈಕಿ ಕೆಲವರನ್ನು ಅನಿವಾರ್ಯವಾಗಿ ನಾಮಿನೇಷನ್ ಮೂಲಕ ಹೊರಹಾಕಬೇಕಾಗಿದೆ. ಹೀಗಾಗಿ ಬಿಗ್ ಬಾಸ್ ಯಾವ ಸ್ಪರ್ಧಿಗೆ ಶಾಕ್ ನೀಡುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇಷ್ಟು ದಿನ ಮಿಡ್ ವೀಕ್ ಎಲಿಮಿನೇಷನ್ ಆಗ ನಡೆಯುತ್ತೆ ಈಗ ನಡೆಯುತ್ತೆ ಅಂತಾ ಹೇಳಲಾಗುತ್ತಿತ್ತು. ಇದಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಕೆಲವೇ ದಿನಗಳಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದ್ದು, ಒಂದೇ ದಿನ ಮೂವರು ಸ್ಪರ್ಧಿಗಳು ಹೊರಹೋಗಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಯಾರು ಬಿಗ್ ಮನೆಯಿಂದ ಹೊರಗೆ ಹೋಗುತ್ತಾರೆ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಎರಡೇ ವಾರಗಳು ಬಾಕಿ ಇರುವ ಹೊತ್ತಿನಲ್ಲಿ ಬಿಗ್ ಬಾಸ್ ಯಾರಿಗೆ? ಯಾವ ಸಮದಲ್ಲಿ ಶಾಕ್ ನೀಡಲಿದ್ದಾರೆ ಅನ್ನೋದೇ ಕುತೂಹಲ ಮೂಡಿದೆ.
ಸದ್ಯ ಇರುವ 9 ಜನರ ಪೈಕಿ ಉತ್ತಮ ಪ್ರದರ್ಶನ ನೀಡುತ್ತಿರುವ ತ್ರಿವಿಕ್ರಮ್, ರಜತ್, ಹನುಮಂತು, ಉಗ್ರಂ ಮಂಜು, ಮತ್ತು ಭವ್ಯಾ ಗೌಡ ಟಾಪ್ ಫೈವ್‌ನಲ್ಲಿರುತ್ತಾರೆ ಎನ್ನಲಾಗಿದೆ. ಇನ್ನು ಧನರಾಜ್ ಆಚಾರ್, ಮೋಕ್ಷಿತ ಪೈ, ಗೌತಮಿ ಜಾಧವ್ ಮತ್ತು ಚೈತ್ರಾ ಕುಂದಾಪುರ ಈ ನಾಲ್ವರಲ್ಲಿ ಯಾರು ಸೇವ್ ಆಗ್ತಾರೆ, ಯಾರು ಎಲಿಮಿನೇಷನ್ ಆಗಿ ಹೊರ ಹೋಗುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಶೀಘ್ರವೇ ಸ್ವತಃ ಬಿಗ್ ಬಾಸ್ ಅವರೇ ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಕಾರ ಮಿಡ್ ವೀಕ್ ಎಲಿಮಿನೇಷನ್ ನಡೆದರೆ ಎಷ್ಟು ಜನರ ಬಿಗ್ ಮನೆಯಿಂದ ಹೊರಹೋಗಬೇಕು? ಮತ್ತು ಯಾವ ಸ್ಪರ್ಧಿಗಳು ಹೊರಹೋಗಬೇಕು ಅನ್ನೋದನ್ನು ಕಾಮೆಂಟ್ ಮೂಲಕ ತಿಳಿಸಿರಿ.