Bigg Boss Winner: ಅತಿ ಹೆಚ್ಚು ಜನಮತ ಪಡೆದ ಈ ಸ್ಪರ್ಧಿಯೇ ಬಿಗ್ ಬಾಸ್ ವಿನ್ನರ್!!
ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಸಂಗೀತಾ ಶೃಂಗೇರಿ ಎಂದು ಹಲವು ಊಹಾಪೋಹಗಳಿವೆ.
ಇನ್ನೂ ಕೆಲವರು ಕನ್ನಡ ಈ ಬಾರಿಯ ಕನ್ನಡ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಎನ್ನುತ್ತಿದ್ದಾರೆ.
ಆದರೆ ಬಿಗ್ ಬಾಸ್ ವೀಕ್ಷಕರ ಮತ್ತೊಂದು ಗುಂಪು ಈ ಅಚ್ಚರಿಯ ಹೆಸರು ಹೇಳುತ್ತಿದೆ.
ಇವರ ಶಾಂತಿ ಮಂತ್ರವೇ ಬಿಗ್ ಬಾಸ್ ಗೆಲುವಿಗೆ ಕಾರಣವಾಗಲಿದೆ ಎನ್ನುತ್ತಿದ್ದಾರೆ.
ಯಾರೇನೆ ಅಂದರು ತಲೆಗೆ ಹಾಕಿಕೊಳ್ಳದೇ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವೀಕ್ ಸನಿಹದವರೆಗೂ ಬಂದಿರುವ ಈ ಸ್ಪರ್ಧಿಯೇ ಟ್ರೋಫಿ ಗೆಲ್ಲೋದು ಎನ್ನುತ್ತಿದ್ದಾರೆ.
ಮನೆಯಲ್ಲಿ ಅತಿ ತಾಳ್ಮೆಯಿಂದ ಇರುವ ಡ್ರೋನ್ ಪ್ರತಾಪ್ ಅವರೇ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಬಿಗ್ ಬಾಸ್ ಫ್ಯಾನ್ಸ್ ಗಳಲ್ಲಿ ಬಹುತೇಕರು ಪ್ರತಾಪ್ ಪರವೇ ಬ್ಯಾಟ್ ಬೀಸುತ್ತಿದ್ದಾರೆ.
ಇದಕ್ಕೆ ಕಾರಣ ಡ್ರೋನ್ ಪ್ರತಾಪ್ ಬರೋಬ್ಬರಿ 420 ಪಾಯಿಂಟ್ಸ್ ಪಡೆದು ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದಿದ್ದರು. ಆದರೆ ಮನೆಯವರ ವೋಟ್ ಸಿಗದ ಕಾರಣ ಅವರು ಫಿನಾಲೆಗೆ ಹೋಗಲಿಲ್ಲ. ಇದು ಪ್ರತಾಪ್ ಗೆ ಪ್ಲಸ್ ಪಾಯಿಂಟ್ ಆಗಿದೆ.
ಜನರ ಈ ಬೆಂಬಲವೇ ಡ್ರೋನ್ ಪ್ರತಾಪ್ ಅವರನ್ನು ಗೆಲ್ಲಿಸುವುದು ಎಂದು ಬಿಗ್ ಬಾಸ್ ಫ್ಯಾನ್ಸ್ ಹೇಳುತ್ತಿದ್ದಾರೆ.