BCCI ಕಾರ್ಯದರ್ಶಿ ಜಯ್ ಶಾ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ? ಅಮಿತ್ ಶಾ ಪುತ್ರನ ಸಾಮ್ರಾಜ್ಯ ಎಷ್ಟೊಂದು ಶ್ರೀಮಂತವಾಗಿದೆ ನೋಡಿ…
ಭಾರತೀಯ ಉದ್ಯಮಿ ಮತ್ತು BCCI ಕಾರ್ಯದರ್ಶಿಯಾಗಿರುವ ಜಯ್ ಶಾ ಸೆಪ್ಟೆಂಬರ್ 22, 1988 ರಂದು ಜನಿಸಿದರು. ಇನ್ನು 2019 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಜಯ್ ಶಾ $15 ಮಿಲಿಯನ್’ಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅಂದರೆ 125-150 ಕೋಟಿ ರೂ.
ಭಾರತೀಯ ಜನತಾ ಪಕ್ಷದ ಚಾಣಾಕ್ಷ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಸೋನಾಲ್ ಅವರ ಪುತ್ರನೇ ಜಯ್ ಶಾ. ನಿರ್ಮಾ ವಿಶ್ವವಿದ್ಯಾಲಯದಿಂದ ಬಿ.ಟೆಕ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಶಾ, ಅಹಮದಾಬಾದ್‌ನಲ್ಲಿ ಜಯೇಂದ್ರ ಸೆಹಗಲ್ ಬಳಿ ಕ್ರಿಕೆಟ್ ತರಬೇತಿ ಪಡೆದರು.
ಜಯ್ ಶಾ 2019 ರಲ್ಲಿ BCCI ಯ ಕಾರ್ಯದರ್ಶಿಯ ಪಾತ್ರವನ್ನು ವಹಿಸಿಕೊಂಡರು. ಶಾ, ಟೆಂಪಲ್ ಎಂಟರ್‌ಪ್ರೈಸ್’ನ ನಿರ್ದೇಶಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿದ್ದಾರೆ. ಇದು ಕೃಷಿ ಸರಕುಗಳನ್ನು ವ್ಯಾಪಾರ ಮಾಡುವ ವ್ಯವಹಾರವಾಗಿದ್ದು, 2004 ರಲ್ಲಿ ಸ್ಥಾಪಿಸಲಾಯಿತು.
ಅಂದಹಾಗೆ ಜಯ್ ಶಾ, ಬಾಲ್ಯದ ಗೆಳತಿ ರಿಷಿತಾ ಪಟೇಲ್ ಅವರನ್ನು ಫೆಬ್ರವರಿ 2015 ರಲ್ಲಿ ವಿವಾಹವಾದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಪ್ರಮುಖ ಗಣ್ಯರು ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.