Dream Interpretation: ನಿಮ್ಮ ಕನಸಲ್ಲೂ ಇವುಗಳನ್ನು ಕಂಡಿದ್ದರೆ, ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರ್ಥ

Mon, 19 Apr 2021-6:59 pm,

ನಿಮ್ಮ ಕನಸಿನಲ್ಲಿ ನೀವು ಬೆಕ್ಕನ್ನು ನೋಡಿದ್ದರೆ, ಅದನ್ನು ಶುಭ ಎಂದು ಕರೆಯಲಾಗುವುದಿಲ್ಲ. ಈ ರೀತಿಯ ಕನಸು ಕೆಟ್ಟ ಸಮಯಗಳನ್ನು ಸೂಚಿಸುತ್ತದೆ.  ಭವಿಷ್ಯದಲ್ಲಿ ಯಾರಾದರೂ ನಿಮಗೆ ದ್ರೋಹ ಮಾಡಲಿದ್ದಾರೆ ಎನ್ನುವುದನ್ನು ಕೂಡಾ ಇದು ಸೂಚಿಸುತ್ತದೆ. 

ಕನಸಿನಲ್ಲಿ ಭೂಕಂಪದ ದೃಶ್ಯವನ್ನು ನೋಡಿದರೆ, ಅದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಕನಸು ಕಾಣುವುದರಿಂದ ನಿಮ್ಮ ಮಗುವಿಗೆ ಭವಿಷ್ಯದಲ್ಲಿ ಕೆಲವು ರೀತಿಯ ಸಮಸ್ಯೆಗಳಾಗಬಹುದು ಎನ್ನಲಾಗುತ್ತದೆ. 

 ಕನಸಿನಲ್ಲಿ  ಮದುವೆಯ ದಿಬ್ಬಣವನ್ನು ನೋಡುವುದು ಅಥವಾ ಡೋಲು ನಗಾರಿ ಬಾರಿಸುವುದನ್ನು ನೋಡುವುದು ಸಹ ಒಳ್ಳೆಯದಲ್ಲ. ಈ ರೀತಿಯ ಕನಸು ನಿಮ್ಮ ಜೀವನದಲ್ಲಿ ಮುಂಬರುವ ಸಮಯದಲ್ಲಿ ಒಂದು ರೀತಿಯ ತೊಂದರೆ ಅಥವಾ ಬಿಕ್ಕಟ್ಟು ಸಂಭವಿಸಲಿದೆ ಎಂದು ಸೂಚಿಸುತ್ತದೆ.

ಒಣಗಿದ ಉದ್ಯಾನವನ್ನು ನೋಡಿದರೆ, ಅದು ಕೂಡಾ ಎದುರಾಗಬಹುದಾದ ಗಂಭೀರ ಸಮಸ್ಯೆಗಳನ್ನು ಗೋಚರಿಸುತ್ತದೆ. 

ಕನಸಿನಲ್ಲಿ ಇರುವೆಗಳು ಅಥವಾ ಕೀಟಗಳನ್ನು ನೋಡುವುದು ಸಹ ಭವಿಷ್ಯದಲ್ಲಿ ಎದುರಾಗಬಹುದಾದ ನೋವಿನ ದಿನಗಳನ್ನು ತೋರಿಸುತ್ತದೆ. ಇನ್ನು ಕನಸಿನಲ್ಲಿ ಎಷ್ಟು ಪ್ರಮಾಣದಲ್ಲಿ ಕೀಟಗಳನ್ನು ನೋಡುತ್ತಿರೋ ನೋವು ಅಷ್ಟೇ ಪ್ರಮಾಣದಲ್ಲಿರುತ್ತದೆ ಎಂದರ್ಥ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link