ಗ್ಯಾರಂಟಿ ಯೋಜನೆಗೆ ನೋಂದಣಿ ಮಾಡೋ ಮುನ್ನ ಎಚ್ಚರ.. ಎಚ್ಚರ..!
ನೀವೂ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಾಗಿ ನೋಂದಣಿ ಮಾಡಲು ಹೊರಟಿದ್ದೀರಾ... ಹಾಗಿದ್ದರೆ, ಎಚ್ಚರ, ಎಚ್ಚರ, ಎಚ್ಚರ! ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಗೃಹಲಕ್ಷ್ಮಿ ಆ್ಯಪ್, ಶಕ್ತಿ ಆ್ಯಪ್, ಯುವನಿಧಿ ಆ್ಯಪ್ಗಳ ರೀತಿಯಲ್ಲೇ ತಲೆ ಎತ್ತಿವೆ ನಕಲಿ ಆ್ಯಪ್ಗಳು.
ಹೌದು, ಸರ್ಕಾರವನ್ನೇ ಸೆಡ್ಡು ಹೊಡೆಯಲು ನಿಂತಿರುವ ಈ ಫೇಕ್ ಆ್ಯಪ್ಗಳು ಸರ್ಕಾರಿ ಗ್ಯಾರೆಂಟಿ ಆ್ಯಪ್ಗಳನ್ನೇ ಮೀರಿಸುತ್ತಿವೆ. ನೀವೇನಾದರೂ ಯಾಮಾರಿ ಇಂತಹ ಆ್ಯಪ್ಗಳಲ್ಲಿ ನಿಮ್ಮ ಮಾಹಿತಿಗಳನ್ನು ಹಂಚಿಕೊಂಡರೆ ಸೈಬರ್ ಕ್ರೈಂ ಕಳ್ಳರು ನಿಮ್ಮ ಡೇಟಾ ಕದಿಯೋದು ಪಕ್ಕಾ.
ಗೃಹಲಕ್ಷ್ಮಿ ಹೆಸರಿನಲ್ಲಿ ಇರುವ ಫೇಕ್ ಆ್ಯಪ್ಗಳು: * ಗೃಹಲಕ್ಷ್ಮಿ ಸ್ಕೀಮ್ ಆ್ಯಪ್ * ಗೃಹಲಕ್ಷ್ಮಿ ಯೋಜನೆ ಅಪ್ಲಿಕೇಶನ್ ಆ್ಯಪ್ * ಗೃಹ ಲಕ್ಷ್ಮಿ ಯೋಜನಾ ಆ್ಯಪ್ * ಕರ್ನಾಟಕ ಲಕ್ಷ್ಮಿ ಯೋಜನಾ ಆ್ಯಪ್
ಗೃಹಜ್ಯೋತಿ ಹೆಸರಿನಲ್ಲಿರುವ ಫೇಕ್ ಆ್ಯಪ್ಗಳು: * ಪೋರ್ಟಲ್ ಗೃಹ ಜ್ಯೋತಿ * ಸ್ಕೀಮ್ ಗೃಹ ಜ್ಯೋತಿ * ಗೃಹ ಜ್ಯೋತಿ ಎಲೆಕ್ಟ್ರಿಸಿಟಿ ಆ್ಯಪ್ * ಗೃಹ ಜ್ಯೋತಿ ಸ್ಕೀಮ್ * ಗೃಹಜ್ಯೋತಿ ಆ್ಯಪ್ * ಗೃಹ ಜ್ಯೋತಿ ಸ್ಕೀಮ್
ಯುವ ನಿಧಿ ಹೆಸರಲ್ಲೂ ಇವೆ ಫೇಕ್ ಆ್ಯಪ್ಗಳು: ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮಾತ್ರವಲ್ಲದೆ, ಯುವ ಜನತೆಗಾಗಿ ಘೋಷಣೆಯಾಗಿರುವ, ಅಲ್ಲದೇ ಇನ್ನು ಜಾರಿಯಾಗದ ಯುವನಿಧಿ ಸ್ಕೀಮ್ ಹೆಸರಿನಲ್ಲಿಯು ಕೂಡ ಫೇಕ್ ಆ್ಯಪ್ ಓಪನ್ ಆಗಿದೆ.
ಪ್ಲೈ ಸ್ಟೋರ್ ನಲ್ಲಿ ಫೇಕ್ ಯುವ ನಿಧಿ ಆ್ಯಪ್ ಕ್ರಿಯೆಟ್ ಮಾಡಿರುವ ಹ್ಯಾಕರ್ಸ್ * ಯುವನಿಧಿ ಸ್ಕೀಮ್ * ಯುವ ನಿಧಿ ಆ್ಯಪ್ * ಯುವ ನಿಧಿ ಆನ್ ಲೈನ್ ಆ್ಯಪ್ಗಳನ್ನು ಸೃಷ್ಟಿಸಿದ್ದಾರೆ.
ಗೂಗಲ್ ಹಾಗೂ ಪ್ಲೈ ಸ್ಟೋರ್‌ನಲ್ಲಿ ಇರುವ ಉಚಿತ ಯೋಜನೆಗಳ ಆ್ಯಪ್ಗಳು ಫೇಕ್ ಆಗಿದ್ದು, ಯಾರೂ ಕೂಡ ಈ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಡಿ. ಒಂದು ವೇಳೆ ಅರ್ಜಿ ಸಲ್ಲಿಸಿದರೆ ಅದು ಸರ್ಕಾರಕ್ಕೆ ತಲುಪುದಿಲ್ಲ. ಬದಲಾಗಿ ಸೈಬರ್ ಖದೀಮರಿಗೆ ನಿಮ್ಮ ಡೇಟಾ, ಮಾಹಿತಿ ಪಡೆದು ಮೋಸ ಮಾಡಲು ಸಹಾಯ ಮಾಡುತ್ತೆ.
ನೀವು ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಸರ್ಕಾರದ ಸೇವಾ ಸಿಂಧು ಮೂಲಕವೇ ಅರ್ಜಿ ಸಲ್ಲಿಸಿ. ಸರ್ಕಾರದಿಂದ ಇನ್ನೂ ಕೂಡ ಯಾವುದೇ ಬೇರೆ ಆ್ಯಪ್ಗಳನ್ನು ರಿಲೀಸ್ ಮಾಡಿಲ್ಲ ಎಂಬುದನ್ನು ನೆನಪಿನಲ್ಲಿಡಿ.