ಈ ಅಕ್ಷರದಿಂದ ಹೆಸರು ಆರಂಭವಾಗುವ ಹುಡುಗಿ ಸಿಕ್ಕರೆ ನೀವೇ ಅದೃಷ್ಟವಂತರು ! ಸಂಗಾತಿಗಾಗಿ ಏನು ಬೇಕಾದರೂ ಮಾಡಲು ಸಿದ್ದ ಇವರು !

Mon, 19 Aug 2024-5:54 pm,

Aಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಶ್ರಮಶೀಲರು ಮತ್ತು ತಾಳ್ಮೆಯಿಂದಿರುತ್ತಾರೆ.ಕಹಿ ಸತ್ಯವಾದರೂ ನೇರವಾಗಿ ಮಾತನಾಡಲು ಇಷ್ಟಪಡುತ್ತಾರೆ.ತಮ್ಮ ಸಂಗಾತಿಯ ಸಂತೋಷಕ್ಕಾಗಿ ಸದಾ ತುಡಿಯುತ್ತಿರುತ್ತಾರೆ.    

V ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ರೋಮ್ಯಾಂಟಿಕ್ ಮತ್ತು ತಮ್ಮ ಸಂಗಾತಿಯ ಬಗ್ಗೆ ಕಾಳಜಿ ವಹಿಸುತ್ತಾರೆ.ಅವರು ತಮ್ಮ ಮನಸ್ಸಿನಲ್ಲಿರುಅವ ಭಾವನೆಯನ್ನು ಮುಚ್ಚಿಡುವುದರಲ್ಲಿ ನಿಸ್ಸೀಮರು.  

S ನಿಂದ ಹೆಸರು ಪ್ರಾರಂಭವಾಗುವ ಜನರು  ರೋಮ್ಯಾಂಟಿಕ್ ಮತ್ತು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಇವರು ತಮ್ಮ ಸಂಗಾತಿಯ ಯಶಸ್ಸಿನ ಬಗ್ಗೆಯೇ ಸದಾ ಯೋಚಿಸುತ್ತಿರುತ್ತಾರೆ. ಅವರ ಏಳಿಗೆಯೇ ಇವರ ಜೀವನದ ಪರಮ ಉದ್ದೇಶ.     

R ಅಕ್ಷರದಿಂದ  ಹೆಸರು ಆರಂಭವಾಗುವ ಜನರು ಸ್ವಲ್ಪ ಅಂತರ್ಮುಖಿಯಾಗಿರುತ್ತಾರೆ.ಅವರ ಸ್ವಭಾವದಿಂದಾಗಿ ಅವರನ್ನು ಜನ ಬಹಳವಾಗಿ ಇಷ್ಟಪಡುತ್ತಾರೆ.ಈ ಹೆಸರಿನವರು ತಮ್ಮ ಸಂಗಾತಿಯ ಸಂತೋಷಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.  

P ಯಿಂದ ಹೆಸರು ಪ್ರಾರಂಭವಾಗುವ ಜನರು ಸತ್ಯವಂತರು ಮತ್ತು ಪ್ರಾಮಾಣಿಕರು. ಅವರು ತುಂಬಾ ಕಲಾತ್ಮಕರು ಮತ್ತು ಯಾವಾಗಲೂ ನಗುತ್ತಾ ಇರುತ್ತಾರೆ.ತಮ್ಮ ಸಂಗಾತಿಯನ್ನು ಸಂತೋಷವಾಗಿರಿಸುತ್ತಾರೆ.

T ಯಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಹಠಮಾರಿಗಳು.   ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಾರೆ.ತಮ್ಮ ಸಂಗಾತಿಯನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಾರೆ ಮತ್ತು ತಮ್ಮ ಸಂಗಾತಿಯಿಂದ ಅದೇ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಾರೆ.   

K ಯಿಂದ ಹೆಸರು ಪ್ರಾರಂಭವಾಗುವ ಜನರು ಹರ್ಷಚಿತ್ತದಿಂದ ಇರುತ್ತಾರೆ. ತಮ್ಮ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ಪಡೆಯುತ್ತಾರೆ.ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. 

Y ಅಕ್ಷರದಿಂದ ಹೆಸರು ಆರಂಭವಾಗುವವರು ಅಹಂಕಾರಿಗಳಾಗಿರುತ್ತಾರೆ. ಯಶಸ್ಸನ್ನು ಪಡೆಯಲು, ಏನು ಮಾಡಲು ಸಾಧ್ಯವೋ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.ಪ್ರೀತಿಯ ವಿಷಯದಲ್ಲಿ, ಇಲ್ಲ-ಇಲ್ಲ ಎನ್ನುತ್ತಲೇ ಮುಂದುವರಿಯುತ್ತಾರೆ. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link