Benefits of Ajwain : ರಾತ್ರಿ ಮಲಗುವ ಮುನ್ನ ತಿಂದರೆ ಒಮಕಾಳು ಆರೋಗ್ಯಕ್ಕಾಗಲಿದೆ ಪ್ರಯೋಜನ

Thu, 11 Nov 2021-8:31 pm,

ಇದು  ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿರುತ್ತದೆ. ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ. ಬೇಸಿಗೆ ಕಾಲದಲ್ಲಿ ಇದನ್ನು ಮಿತವಾಗಿ ಸೇವಿಸಿ. ಚಳಿಗಾಲದಲ್ಲಿ ರಾತ್ರಿ ಮಲಗುವ ಮೊದಲು, ಅರ್ಧ ಅಥವಾ 1 ಚಮಚ ಒಮ ಕಾಳನ್ನು ತಿಂದು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಅನೇಕ ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.   

ಮಲಬದ್ಧತೆ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಬಿಸಿ ಹಾಲು ಅಥವಾ ಬಿಸಿನೀರು ಕುಡಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಒಂದು ಲೋಟ ಬಿಸಿನೀರಿನೊಂದಿಗೆ ಓಮ ಕಾಳನ್ನು ತಿನ್ನಬೇಕು. ಬೆಳಿಗ್ಗೆ ಹೊಟ್ಟೆಯನ್ನು ಶುಚಿಯಾಗಿಸಲು ಇದು ಸಹಾಯ ಮಾಡುತ್ತದೆ. ಕೆಲವು ದಿನ ಹೀಗೆ ಮಾಡಿದರೆ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.  

ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಕೇರಂಬೀಜವನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ಅರ್ಧದಷ್ಟು ಬಂದಾಗ, ಅದನ್ನು ಫಿಲ್ಟರ್ ಮಾಡಿ. ಮಲಗುವ ವೇಳೆಗೆ ಈ ನೀರನ್ನು ಕುಡಿಯಿರಿ. ಇದರಿಂದ ಅತಿಸಾರದ ಸಮಸ್ಯೆಯನ್ನು ನಿವಾರಿಸಬಹುದು.  

ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ರಾತ್ರಿಯ ಊಟದ ನಂತರ, ಓಂ ಕಾಳನ್ನು ತಿಂದು ಬಿಸಿನೀರನ್ನು ಕುಡಿಯಿರಿ.  ಅಜ್ವೈನ್ ಯಾವುದೇ ಅಡ್ಡ ಪರಿಣಾಮ ಬೀರದ ಔಷಧವಾಗಿದೆ. ಇದನ್ನು ದಿನಕ್ಕೆ ಒಮ್ಮೆ ಮಾತ್ರ ಸೇವಿಸಿ, ಅದು ಕೂಡ ಅರ್ಧ ಅಥವಾ ಒಂದು ಚಮಚ.

ಚಳಿಗಾಲ ಆರಂಭವಾದಂತೆ ಮೂಳೆಗಳ ಸಮಸ್ಯೆ ಹೆಚ್ಚಾದರೆ, ಕೀಲುಗಳಲ್ಲಿ ನೋವು ಇದ್ದರೆ ರಾತ್ರಿ ಆಹಾರ ಸೇವಿಸಿದ ಒಂದು ಗಂಟೆಯ ನಂತರ ಒಂದು ಚಮಚ ಕಾಳನ್ನು ಹೆಚ್ಚು ಜಗಿದು ತಿನ್ನಿ. ನಂತರ ಬಿಸಿ ನೀರು ಕುಡಿಯಿರಿ. ಹೀಗೆ ಮಾಡಿದರೆ ನೋವನ್ನು ಬಹಳ ಮಟ್ಟಿಗೆ ನಿವಾರಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link