Benefits of Laughter: ನಗುವಿನ ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು
ನಗುವಿನ ಸಮಯದಲ್ಲಿ ನಮ್ಮ ಶರೀರವು ದೀರ್ಘ ಶ್ವಾಸವನ್ನು ತೆಗೆದುಕೊಂಡು ಹೊರಹಾಕುವ ಕ್ರಿಯೆ ಮಾಡುತ್ತದೆ. ಇದರಿಂದ ದೇಹದಲ್ಲಿ ಸರಿಯಾದ ಮಟ್ಟದಲ್ಲಿ ಆಕ್ಸಿಜನ್ ಸಂಚರಿಸುತ್ತದೆ. ನಗುವುದರಿಂದ ನಮ್ಮ ಶರೀರದಲ್ಲಿ ಆಕ್ಸಿಜನ್ ಮಟ್ಟ ಸರಿಯಾಗಿರುತ್ತದೆ.
ದೇಹದಲ್ಲಿನ ರಕ್ತ ಸಂಚಾರ ನಗುವಿನ ಜೊತೆಗೆ ನೇರ ಸಂಬಂಧ ಹೊಂದಿದೆ. ಬಹಿರಂಗವಾಗಿ ನಗುವ ಜನರಲ್ಲಿ ಇತರರ ಹೋಲಿಕೆಯಲ್ಲಿ ರಕ್ತದೊತ್ತಡ ತುಂಬಾ ಚೆನ್ನಾಗಿರುತ್ತದೆ.
ಬಹಿರಂಗವಾಗಿ ನಗುವುದರಿಂದ ಕೂಡ ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶರೀರಕ್ಕೆ ರೋಗದ ವಿರುದ್ಧ ಹೋರಾಡುವ ಬಲ ಸಿಗುತ್ತದೆ. ನಗುವುದರಿಂದ ಶರೀರದಲ್ಲಿ ಆಂಟಿ ವೈರಲ್ ಹಾಗೂ ಸೋಂಕನ್ನು ತಡೆಯುವ ಕೋಶಗಳು ಹೆಚ್ಚಾಗುತ್ತವೆ.
ನಗು ಹಲವು ರೀತಿಯ ನೋವುಗಳಿಂದ ಪರಿಹಾರ ಸಿಗುತ್ತದೆ. ಉದಾಹರಣೆಗೆ ಬೆನ್ನು ನೋವು ನಿವಾರಣೆಗೂ ಕೂಡ ಇದು ಸಹಾಯ ಮಾಡುತ್ತದೆ.
ಲಾಫಿಂಗ್ ಥೆರಪಿ ನೋವಿನಿಂದಲೂ ಕೂಡ ಪರಿಹಾರ ನೀಡುತ್ತದೆ. ನೀವು 10 ನಿಮಿಷಗಳ ಕಾಲ ನಗುತ್ತಿದ್ದರೆ, ನೋವಿನಿಂದ ಪರಿಹಾರ ಪಡೆಯಬಹುದು ಅಥವಾ ಸುಲಭವಾಗಿ ನಿದ್ರೆಗೆ ಜಾರಬಹುದು.
ನಗುವುದರಿಂದ ಶರೀರದಲ್ಲಿ ಇಂಡೋರ್ಫಿನ್ ಹಾರ್ಮೋನ್ ಸ್ರವಿಕೆಯಾಗುತ್ತದೆ. ಇದರಿಂದ ಸಂಪೂರ್ಣ ಶರೀರಕ್ಕೆ ಖುಷಿ, ಸಕಾರಾತ್ಮಕ ಹಾಗೂ ಉತ್ತಮ ಅನುಭೂತಿಯಾಗುತ್ತದೆ. ಈ ಹಾರ್ಮೋನು ನಿಮ್ಮ ಮೂಡ್ ಅನ್ನು ಫ್ರೆಶ್ ಆಗಿ ಇಡುತ್ತದೆ.
ಲಾಫಿಂಗ್ ಥೆರಪಿಯಿಂದ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ. ಹೀಗಾಗಿ ನಗುವುದು ತುಂಬಾ ಅವಶ್ಯಕವಾಗಿದೆ. ಇದರಿಂದ ಡಿಪ್ರೆಶನ್ ದೂರಾಗುತ್ತದೆ. ಬಹಿರಂಗವಾಗಿ ನಗುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಇದರಿಂದ ನೀವು ಒತ್ತಡ ಮುಕ್ತರಾಗುವಿರಿ.