Benefits Of Milk: ಈ ವಿಶೇಷ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸುತ್ತೆ ಹಾಲು
ನವದೆಹಲಿ: ಹಾಲಿನ ಎಲ್ಲಾ ಪ್ರಯೋಜನಗಳನ್ನು ನೀವು ತಿಳಿದಿರಬೇಕು. ಹಾಲು ಯಾವಾಗಲೂ ದೇಹಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಇದು ಹೃದಯದ ಕಾಯಿಲೆಗಳನ್ನು ಗುಣಪಡಿಸುವುದಲ್ಲದೆ, ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶವನ್ನು ಸಹ ನೀಡುತ್ತದೆ. ಆದರೆ ಹೊಸ ಸಂಶೋಧನೆಯಲ್ಲಿ, ಪ್ರತಿದಿನ ಒಂದು ಲೋಟ ಹಾಲನ್ನು ಸೇವಿಸುವುದರಿಂದ ಹೃದಯದ ಗಂಭೀರ ಕಾಯಿಲೆಗಳ ವಿರುದ್ಧ ದೇಹಕ್ಕೆ ಬಲವಾದ ರಕ್ಷಣೆ ಸಿಗುತ್ತದೆ ಎಂದು ತಿಳಿದುಬಂದಿದೆ.
ಹಾಲಿನ ಸೇವನೆಯು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಂತರರಾಷ್ಟ್ರೀಯ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಈ ಸಂಶೋಧನೆಯಲ್ಲಿ ಎರಡು ಮಿಲಿಯನ್ ಅಮೆರಿಕನ್ ಮತ್ತು ಬ್ರಿಟಿಷ್ ನಾಗರಿಕರನ್ನು ಅಧ್ಯಯನ ಮಾಡಲಾಗಿದ್ದು, ಅದರ ಫಲಿತಾಂಶಗಳನ್ನು ಇಂಟರ್ನ್ಯಾಷನಲ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಪ್ರತಿದಿನ ಒಂದು ಲೋಟ ಹಾಲು ಸೇವಿಸುವ ಜನರಲ್ಲಿ ಹೃದಯಾಘಾತದ (Heart Problems) ಅಪಾಯವು ಶೇಕಡಾ 14 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆ ಕಂಡುಹಿಡಿದಿದೆ. ಆದಾಗ್ಯೂ, ಇಲ್ಲಿಯವರೆಗೆ ಡೈರಿ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿತ್ತು.
ಇದನ್ನೂ ಓದಿ - Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ
ಈ ಸಂಶೋಧನೆಯಲ್ಲಿ ಅನೇಕ ವಿಶ್ವವಿದ್ಯಾಲಯಗಳ ತಜ್ಞರು ಭಾಗಿಯಾಗಿದ್ದರು. ಪ್ರತಿದಿನ ಹಾಲು ಕುಡಿಯುವ ಜನರಲ್ಲಿ ಬಾಡಿ ಮಾಸ್ ಇಂಡೆಕ್ಸ್ ಸರಾಸರಿ ಹೆಚ್ಚಾಗಿದೆ ಎಂದು ತಿಳಿಸುವ ಮೂಲಕ ಸಂಶೋಧನೆಯು ಗಮನ ಸೆಳೆದಿದೆ. ಅದಾಗ್ಯೂ, ನಿತ್ಯ ಹಾಲು (Milk) ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುಗಿರುವುದಕ್ಕೆ ಸಂಶೋಧನೆಯಲ್ಲಿ ಯಾವುದೇ ನಿಖರ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.
ಇದನ್ನೂ ಓದಿ - ಹಾಲು ಯಾವಾಗ ಕುಡಿದರೆ ಒಳ್ಳೆಯದು..! ಸಿಂಪಲ್ ಹೆಲ್ತ್ ಟಿಪ್ಸ್
ಹಾಲಿನ ಸೇವನೆಯು ದೇಹವನ್ನು ಬಲಪಡಿಸುತ್ತದೆ. ಹಾಲು ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಪ್ರೋಟೀನ್‌ಗಳನ್ನು ಸಹ ನೀಡುತ್ತದೆ. ಇತ್ತೀಚಿಗೆ ಹಾಲಿನ ಪ್ರಯೋಜನಗಳಿಗೆ ಸಂಬಂಧಿಸಿದ ಈ ಅಧ್ಯಯನವನ್ನು ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ ಪ್ರಕಟಿಸಲಾಗಿದೆ.