Body Cleaning Tips: ಕತ್ತು ಕಂಕುಳಿನ ಕಪ್ಪು ಕಲೆಯನ್ನು ತೆಗೆಯುವ ಸುಲಭ ವಿಧಾನ ಇದು

ಪ್ರತಿದಿನ ಸ್ವಚ್ಛಗೊಳಿಸಿದರೂ ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಈ ಭಾಗದಲ್ಲಿ ಕಪ್ಪು ಬಣ್ಣ ಕಾಣಿಸಲು ಆರಂಭವಾಗುತ್ತದೆ. 

Written by - Ranjitha R K | Last Updated : May 18, 2021, 02:57 PM IST
  • ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ
  • ಕುತ್ತಿಗೆ ಮತ್ತು ಕಂಕುಳ ಭಾಗದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ
  • ಈ ಸಮಸ್ಯೆಗೆ ಸುಲಭ ಪರಿಹಾರ ಏನು ತಿಳಿಯಿರಿ
Body Cleaning Tips: ಕತ್ತು ಕಂಕುಳಿನ ಕಪ್ಪು ಕಲೆಯನ್ನು ತೆಗೆಯುವ ಸುಲಭ ವಿಧಾನ ಇದು  title=
ಕುತ್ತಿಗೆ ಮತ್ತು ಕಂಕುಳ ಭಾಗದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ (file photo)

ನವದೆಹಲಿ : Body Cleaning Tips : ಪ್ರತಿದಿನ ಸ್ವಚ್ಛಗೊಳಿಸಿದರೂ ದೇಹದ ಕೆಲ ಭಾಗಗಳಲ್ಲಿ ಕೊಳೆ ಉಳಿದುಕೊಂಡು ಬಿಡುತ್ತದೆ. ಹೀಗಾಗಿ ಈ ಭಾಗದಲ್ಲಿ ಕಪ್ಪು ಬಣ್ಣ ಕಾಣಿಸಲು ಆರಂಭವಾಗುತ್ತದೆ. ನೋಡುವುದಕ್ಕೂ ಇದು ಅಸಹ್ಯವಾಗಿ ಕಾಣುತ್ತದೆ. ಮುಖ್ಯವಾಗಿ ಕುತ್ತಿಗೆ ಮತ್ತು ಕಂಕುಳ ಭಾಗದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈಗ ಬೇರೆ ಬೇಸಿಗೆ (Summer) . ಬೇಸಿಗೆ ಬೆವರಿಗೆ ಮತ್ತೂ ಕೊಳೆ ಹಾಗೆಯೇ ಅಂಟಿಕೊಂಡಿರುತ್ತದೆ. ಸಾಬೂನು, ಶವರ್ ಜೆಲ್ ಗಳನ್ನು ಎಷ್ಟು ಹಾಕಿ ತಿಕ್ಕಿದರೂ ಈ ಕಪ್ಪು ಕೊಳೆ ಹೋಗುವುದೇ ಇಲ್ಲ. 

ಈ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನವನ್ನು ನಾವು ಹೇಳುತ್ತೇವೆ. ಈ ವಿಧಾನವನ್ನು ಬಹಳ ಹಿಂದಿನಿಂದಲೂ ಅನುಸರಿಸಲಾಗುತ್ತಿದೆ. 
- ಹಸಿ ಹಾಲಿನಲ್ಲಿ (Milk) ಬಹಳಷ್ಟು ಪೋಷಕಾಂಶಗಳಿರುತ್ತವೆ. ಹಸಿ ಹಾಲಿಗೆ ಅರಶಿನ ಬೆರೆಸಿ  , ಕುತ್ತಿಗೆ, ಕಂಕುಳ ಭಾಗಕ್ಕೆ ಹಚ್ಚಿದರೆ  ಕಪ್ಪು ಬಣ್ಣ ತಿಳಿಯಾಗುತ್ತದೆ. ಹೀಗೆ ಹಚ್ಚಿದ ಹಾಲು ಮತ್ತು ಅರಶಿನ (Turmeric) ಮಿಶ್ರಣವನ್ನು ಸುಮಾರು 20 ನಿಮಿಷಗಳವರೆಗೆ ಹಾಗೆಯೇ ಬಿಟ್ಟು, ತಣ್ಣಗಿನ ನೀರಿನಲ್ಲಿ ತೊಳೆಯಬೇಕು.

ಇದನ್ನೂ ಓದಿ : ತಲೆದಿಂಬಿನ ಕೆಳಗೆ ಬೆಳ್ಳುಳ್ಳಿ ಎಸಳು ಇಟ್ಟು ಮಲಗಿದರೆ ಸಿಗಲಿದೆ ಅದ್ಬುತ ಪ್ರಯೋಜನ

- ಬಾದಾಮಿ ಎಣ್ಣೆಯನ್ನು (Almond oil) ಉಪಯೋಗಿಸಿದರೂ ಪ್ರಯೋಜನಕಾರಿಯಾಗಲಿದೆ. ಬಾದಾಮಿ ಎಣ್ಣೆಯಲ್ಲಿ ಸ್ವಲ್ಪ ಜೇನು ತುಪ್ಪ (honey) ಮತ್ತು ಹಾಲಿನ ಪುಡಿ ಬೆರೆಸಿ. ಈ ಮಿಶ್ರಣವನ್ನು ಕುತ್ತಿಗೆ, ಕಂಕುಳಕ್ಕೆ ಹಚ್ಚಿ. ಮಿಶ್ರಣ ಪೂರ್ತಿ ಒಣಗಿದ ಮೇಲೆ ಸ್ವಚ್ಛಗೊಳಿಸಿ. 

- ಇನ್ನೂ ಸ್ನಾನಕ್ಕೂ ಮುನ್ನ ಕುತ್ತಿಗೆ, ಕಂಕುಳಕ್ಕೆ ನಿಂಬೆರಸ (Lemon) ಹಚ್ಚುವುದರಿಂದಲೂ ಈ ಸಮಸ್ಯೆ ಪರಿಹಾರವಾಗಲಿದೆ. ನಿಂಬೆ ರಸ ಬ್ಲೀಚ್ ತರಹ ಕೆಲಸ ಮಾಡುವುದರಿಂದ ಕಪ್ಪು ಕೊಳೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. 

ಇದನ್ನೂ ಓದಿ :  Immunity Booster : ರೋಗ ನಿರೋಧಕ ಶಕ್ತಿಗೆ ಸೇವಿಸಿ 'ಅಮೃತ ಬಳ್ಳಿ ಕಷಾಯ' : ಇಲ್ಲಿದೆ 5 ಪ್ರಯೋಜನಗಳು!

- ಲೋಳೆ ರಸ ಅಥವಾ ಅಲೋವಿರಾವನ್ನು (aloe vera) ಕತ್ತು, ಕಂಕುಳಕ್ಕೆ ಹಚ್ಚಿ ಸ್ವಲ್ಪ ಹೊತ್ತು ಉಜ್ಜಬೇಕು. ನಂತರ ತಣ್ಣೀರಿನಿಂದ ತೊಳೆದರೆ ಸಮಸ್ಯೆ ಪರಿಹಾರವಾಗಲಿದೆ. ಅಲೋವಿರಾ ಚರ್ಮಕ್ಕೆ ವಿಶೇಷ ಹೊಳಪನ್ನು ಕೂಡಾ ನೀಡುತ್ತದೆ. ಹಾಗಾಗಿ ಕತ್ತು ಮತ್ತು ಕಂಕುಳದ ಕಪ್ಪು ಬಣ್ಣವನ್ನು ಸಂಪೂರ್ಣವಾಗಿ ತೆಗೆದುಹಾಕಲು ಇದು ಸಹಾಯ ಮಾಡುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News