ನುಗ್ಗೆ ಸೋಪ್ಪಿನಲ್ಲಿದೆ ಆರೋಗ್ಯದಾಯಕ ಲಾಭಗಳು
ನುಗ್ಗೆ ಸೊಪ್ಪಿನಲ್ಲಿ ಐಸೋಥಿಯೋಸಿಯಾನೇಟ್ ಎಂಬ ಸಕ್ರಿಯ ವಸ್ತುವಿದ್ದು, ಇದು ನಿಮ್ಮ ದೇಹ ಪ್ರತಿದಿನ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುತ್ತದೆ.
ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ.
ನುಗ್ಗೆ ಸೊಪ್ಪು ಮಲಬದ್ಧತೆ, ಉಬ್ಬರಿಕೆ, ಅನಿಲ, ಜಠರದ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆ ಇರುವವರು , ತಮ್ಮ ಆಹಾರದಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ.
ನುಗ್ಗೆ ಸೊಪ್ಪಿನಲ್ಲಿರುವ ಅಧಿಕ ಪೋಷಕಾಂಶವು ತಾಯಿಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗು ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟುವ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ.