Benefits of Ragi: ರಾಗಿಯಿಂದ ಸಿಗುವ ಈ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ!
ಮಧುಮೇಹ ನಿಯಂತ್ರಣ: ರಾಗಿಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಅಧಿಕವಾಗಿದೆ. ಮಧುಮೇಹ ಇರುವವರು ಪ್ರತಿದಿನ ರಾಗಿಯನ್ನು ಸೇವಿಸುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಅಧಿಕ ಪ್ರಮಾಣದಲ್ಲಿ ಕಂಡು ಬರುವ ಖನಿಜಾಂಶಗಳು: ರಾಗಿಯಲ್ಲಿ ಪೊಟ್ಯಾಶಿಯಂ, ರಂಜಕ ಮತ್ತು ಕಬ್ಬಿಣ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ಹಿಮೋಗ್ಲೋಬಿನ್ (Hemoglobin) ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ: ಇದರಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವುದರಿಂದ ನಮ್ಮ ದೇಹದಲ್ಲಿ ಮೂಳೆಗಳು ಬಲಿಷ್ಠವಾಗುತ್ತವೆ (Strengthens the bones) . ಇದು ಕೀಲು ನೋವು, ಮೊಣಕಾಲು ನೋವು ಮತ್ತು ಮುರಿತದಂತಹ ಸಮಸ್ಯೆಗಳನ್ನು ತಡೆಯಬಹುದು.
ಇದನ್ನೂ ಓದಿ- ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ
ದೇಹಕ್ಕೆ ವಿಶ್ರಾಂತಿ: ಇದರಲ್ಲಿರುವ ಅಮೈನೋ ಆಸಿಡ್ ಖಿನ್ನತೆ (Depression), ತಲೆನೋವು ಮತ್ತು ನಿದ್ರಾಹೀನತೆಯಂತಹ ರೋಗಗಳನ್ನು ಗುಣಪಡಿಸುತ್ತದೆ.
ಕೊಬ್ಬುಗಳನ್ನು ಕರಗಿಸುತ್ತದೆ: ರಾಗಿಯಲ್ಲಿ ಫೈಬರ್ ಸಮೃದ್ಧವಾಗಿದೆ ಮತ್ತು ಯಕೃತ್ತಿನಿಂದ ಬಿಡುಗಡೆಯಾದ ಕೊಬ್ಬನ್ನು ಕರಗಿಸಲು ಮತ್ತು ಶುದ್ಧೀಕರಿಸಲು ಥ್ರಯೋನಿನ್ ಎಂಬ ಅಮೈನೋ ಆಸಿಡ್ ಸಹಾಯ ಮಾಡುತ್ತದೆ.