Belly Fat Loss: ಹೊಟ್ಟೆಯನ್ನು ಕರಗಿಸಲು ಬಲು ಲಾಭದಾಯಕ ಈ 5 ಮಾರ್ನಿಂಗ್ ಡ್ರಿಂಕ್ಸ್
ನೀವು ನಿಮ್ಮ ಹೊಟ್ಟೆಯ ಸುತ್ತಲೂ ಶೇಖರವಾಗಿರುವ ಫ್ಯಾಟ್ ಕರಗಿಸಿ, ಸ್ಲಿಮ್ ಆದ ಹೊಟ್ಟೆಯನ್ನು ಪಡೆಯಲು ಪ್ರಾರಂಭಿಸಿದರೆ ಕೆಲವು ಪಾನೀಯಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಹೌದು, ಪ್ರತಿದಿನ ಕೆಲವು ಆರೋಗ್ಯಕರ ಮಾರ್ನಿಂಗ್ ಡ್ರಿಂಕ್ಸ್ ನೊಂದಿಗೆ ನಿಮ್ಮ ದಿನವನ್ನು ಆರಂಭಿಸಿದರೆ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿಸಿ ಚಪ್ಪಟೆಯಾದ ಹೊಟ್ಟೆ ನಿಮ್ಮದಾಗಿಸಬಹುದು. ಅಂತಹ ಐದು ಪಾನೀಯಗಳೆಂದರೆ...
ನಿತ್ಯ ಬೆಳಿಗ್ಗೆ ನಿಂಬೆ ಮಿಶ್ರಿತ ನೀರಿನೊಂದಿಗೆ ದಿನವನ್ನು ಆರಂಭಿಸಿದರೆ ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ಕರಗಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಪ್ರತಿದಿನ ಬೆಳಿಗ್ಗೆ ಮೊದಲು ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ಇದು ಚಯಾಪಚಯ ಹೆಚ್ಚಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಬ್ಲಡ್ ಶುಗರ್ ನಿಯಂತ್ರಿಸುವ ಮೂಲಕ ತೂಕ ಇಳಿಕೆಗೆ ಕೊಡುಗೆ ನೀಡುತ್ತದೆ.
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ನೇರವಾಗಿ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ಫ್ಯಾಟ್ ಅನ್ನು ಕರಗಿಸಲು ಸಹಕಾರಿ ಆಗಿದೆ.
ಇದರಲ್ಲಿರುವ ಅಸಿಟಿಕ್ ಆಮ್ಲವು ಕೊಬ್ಬನ್ನು ಒಡೆಯಲು ಸಹಕಾರಿ ಆಗಿರುವುದರಿಂದ ತೂಕ ಇಳಿಕೆಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆಪಲ್ ಸೈಡರ್ ವಿನೆಗರ್ ಕುಡಿಯಲು ಸಲಹೆ ನೀಡಲಾಗುತ್ತದೆ.
ಫೆನ್ನೆಲ್/ಸೋಂಪನ್ನು ನೀರಿನಲ್ಲಿ ಬೆರೆಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊಟ್ಟೆ ಫ್ಯಾಟ್ ಕರಗಿ ಚಪ್ಪಟೆಯಾದ ಹೊಟ್ಟೆಯನ್ನು ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.