ಮಗು ಎಷ್ಟೇ ಓದಿದರೂ ನೆನಪು ಉಳಿಯುವುದಿಲ್ಲವೇ !ಈ ದಿಕ್ಕಿಗೆ ಮುಖ ಹಾಕಿ ಕುಳಿತು ಓದಿದರೆ ಸರಾಗವಾಗಿ ಒಲಿಯುತ್ತಾಳೆ ವಿದ್ಯಾ ಲಕ್ಷ್ಮೀ !ಶತ ದಡ್ಡ ಕೂಡಾ ಉತ್ತಮ ಅಂಕ ಗಳಿಸುವುದು ಗ್ಯಾರಂಟಿ !
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದುವುದು ಮಾತ್ರವಲ್ಲ, ಓದಲು ಕುಳಿತುಕೊಳ್ಳುವ ಸ್ಥಳ ಕೂಡಾ ಬಹಳ ಮುಖ್ಯ. ಓದುವ ಕೋಣೆಯಲ್ಲಿ ಕೆಲವು ಬದಲಾವಣೆ ಮಾಡಿಕೊಂಡರೆ ಒಳ್ಳೆಯದಾಗುವುದು ನೂರಕ್ಕೆ ನೂರು ಪ್ರತಿಶತ ಸತ್ಯ.
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದಲು ಕುಳಿತುಕೊಳ್ಳುವ ಕೋಣೆ ಉತ್ತರ ದಿಕ್ಕಿನಲ್ಲಿರಬೇಕು. ಇದು ಸಾಧ್ಯವಾಗದೇ ಹೋದರೆ ಈಶಾನ್ಯ ದಿಕ್ಕಿನಲ್ಲಿದ್ದರೂ ಪರವಾಗಿಲ್ಲ.
ಇನ್ನು ಪುಸ್ತಕಗಳನ್ನು ಇಡುವ ರ್ಯಾಕ್ ಕೂಡಾ ಪೂರ್ವ ದಿಕ್ಕಿನಲ್ಲಿಯೇ ಇರಬೇಕು. ರ್ಯಾಕ್ ಇಲ್ಲದೆ ಹೋದರೂ ಪುಸ್ತಕಗಳನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇಡಬೇಕು.
ಇನ್ನು ಎಲ್ಲಿಯೇ ಕುಳಿತು ಓದುವಗಾಲೂ ಮಗುವಿನ ಮುಖವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಹಾಕಿ ಕುಳಿತು ಓದಬೇಕು.ಮಕ್ಕಳು ಓದುವಾಗ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಲೇ ಬಾರದು.
ಇನ್ನು ಓದುವ ಪುಸ್ತಕಗಳನ್ನು ಇಡುವ ಜಾಗದಲ್ಲಿ ಗ್ಲೋಬ್ ಅಥವಾ ಪಿರಾಮಿಡ್ ಅನ್ನು ಇಟ್ಟರೆ ಅದು ಫಲಕಾರಿಯಾಗುತ್ತದೆ.ಈ ಎರಡೂ ವಸ್ತುಗಳು ನಿಮ್ಮ ಓದುವ ಕೋಣೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತವೆ.
ಮಕ್ಕಳು ಓದಲು ಕೂರುವ ಕೋಣೆಯಲ್ಲಿ ಗಡಿಯಾರ ಇದ್ದರೆ ಅದು ಈಶಾನ್ಯ ದಿಕ್ಕಿನಲ್ಲೇ ಇರಬೇಕು ಎನ್ನುವುದು ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ.
ಇನ್ನು ಮಕ್ಕಳ ವಿದ್ಯೆಗೆ ಗಣೇಶ ಮತ್ತು ಸರಸ್ವತಿ ಇಬ್ಬರ ಆಶೀರ್ವಾದ ಕೂಡಾ ಮುಖ್ಯ. ಹಾಗಾಗಿ ಅವರು ಓದಲು ಕೂರುವ ಜಾಗದಲ್ಲಿ ಗಣಪತಿ ಅಥವಾ ಸರಸ್ವತಿ ಫೋಟೊ ಹಾಕಿದರೆ ಒಳ್ಳೆಯದು.
ಇನ್ನು ಏನೇ ಮಾಡಿದರೂ ಮಗು ಓದುವುದರಲ್ಲಿ ಆಸಕ್ತಿಯೇ ತೋರುವುದಿಲ್ಲ ಎಂದಾದರೆ ಮಗು ಓದಲು ಕುಳಿತು ಕೊಳ್ಳುವ ಕೋಣೆಯಲ್ಲಿ ನವಿಲುಗರಿಯನ್ನು ಇರಿಸಿ.ಇದು ಮಗುವಿನ ಏಕಾಗ್ರತೆ ಹೆಚ್ಚಿಸುತ್ತದೆ.
ಸೂಚನೆ :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.