Best Games of 2021 : ಬರುತ್ತಿದೆ PUBGಯನ್ನುಮೀರಿಸುವ ಗೇಮ್ಸ್

Tue, 05 Jan 2021-9:06 pm,

ನೂತನ ಹಿಟ್ ಮ್ಯಾನ್ 3 (Hitman 3) ಜನವರಿಯಲ್ಲಿ ಲಾಂಚ್  ಆಗಲಿದೆ. ಟೆಕ್ ಸೈಟ್ cnet.comನ ಪ್ರಕಾರ  Agent 47 ಹೆಸರಿನಲ್ಲಿ ಪ್ರಖ್ಯಾತಿಯಾಗಿದ್ದ ಹಿಟ್ ಮ್ಯಾನ್ (Hitman) ಮೊದಲು 2016ರಲ್ಲಿ ಲಾಂಚ್ ಆಗಿತ್ತು. ಹಿಟ್ ಮ್ಯಾನ್3ಯಲ್ಲಿ ಇಡೀ ಜಗತ್ತನೇ ಸುತ್ತಿ ಶತ್ರುಗಳನ್ನು ಮುಗಿಸಿಬಿಡಬಹುದು.  

ಮಾರಿಯೋ ಆಟವಾಡುವವರಿಗೂ ಇಲ್ಲಿದೆ ಗುಡ್ ನ್ಯೂಸ್. ಫೆಬ್ರವರಿಯಲ್ಲಿ Super Mario 3D World + Bowser's Fury ಕೂಡಾ ಲಾಂಚ್ ಆಗಲಿದೆ. ಫೆಬ್ರವರಿಯಲ್ಲಿ ಬರಲಿರುವ Super Mario 3D World ಗೇಮ್ ಒರಿಜಿನಲ್ ರಿಲೀಸ್ ಎನ್ನಲಾಗಿದೆ.

ಇನ್ನು ಮಾರ್ಚ್ ತಿಂಗಳಲ್ಲಿ  Monster Hunter Rise ಗೇಮ್ ಬರಲಿದೆ. PS4 ಮತ್ತು Xbox ನಲ್ಲಿ  ಎಲ್ಲರ ಮೆಚ್ಚುಗೆ ಪಡೆದಿದ್ದ Monster Hunter Rise ಅನ್ನುಈ ಬಾರಿ Nintendo ನಲ್ಲಿಯೂ ಲಾಂಚ್ ಮಾಡಲಾಗುತ್ತದೆ. 

ನೀವು ಈ ಆಟದಲ್ಲಿ ಬಂಧಿಯಾಗಿದ್ದೀರಿ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾದರೆ 8 ಜನರ ಪ್ರಾಣತೆಗೆಯಬೇಕಾಗುತ್ತದೆ. ಈ ರೀತಿಯ ಗೇಮ್   Deathloop. ಈ ಗೇಮ್ ನಟೀಸರ್ ಭಾರೀ ಸುದ್ದಿ ಮಾಡಿತ್ತು.    

ಯಾರೆಲ್ಲ The Sands of Time ಅನ್ನು ಮೊದಲು ಆಡಿದ್ದೀರೋ ಅವರಿಗೂ ಒಂದು  ಒಳ್ಳೆ ಸುದ್ದಿ ಇದೆ. Prince of Persia: The Sands of Time Remake ಮಾರ್ಚ್ ತಿಂಗಳಲ್ಲಿ ಬರಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link