ನಿಯಮಿತವಾಗಿ ಈ 5 ಜ್ಯೂಸ್ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್
ನಮ್ಮಲ್ಲಿ ಕೆಲವರಿಗೆ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿ ಕಾಡುತ್ತದೆ. ಅದರಲ್ಲೂ, ಹೊಟ್ಟೆ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಆರೋಗ್ಯ ತಜ್ಞರ ಪ್ರಕಾರ, ಪ್ರತಿದಿನ ಕೆಲವು ಆರೋಗ್ಯಕರ ಜ್ಯೂಸ್ಗಳನ್ನು ಸೇವಿಸುವುದರಿಂದ ದೇಹದಲ್ಲಿ ಶೇಖರವಾಗಿರುವ ಅನಾರೋಗ್ಯಕರ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು ಎಂದು ಹೇಳಲಾಗುತ್ತದೆ. ಅಂತಹ 5 ಜ್ಯೂಸ್ಗಳು ಯಾವುದು ಎಂದು ತಿಳಿಯೋಣ...
ರುಚಿಯಲ್ಲಿ ಕಹಿಯಾಗಿರುವ ಹಾಗಲಕಾಯಿ ಕಡಿಮೆ ಕ್ಯಾಲೋರಿಯುಳ್ಳ ತರಕಾರಿ. ನಿಯಮಿತವಾಗಿ ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿರುವ ಕ್ಯಾರೆ ಅತಿ ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ನಿಯಂತ್ರಿಸಬಹುದು.
ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಅನ್ನು ಜ್ಯೂಸ್ ತಯಾರಿಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಚಯಾಪಚಯವನ್ನು ಹೆಚ್ಚಿಸಿ ತೂಕ ನಿಯಂತ್ರಣಕ್ಕೆ ಕೊಡುಗೆ ನೀಡುತ್ತದೆ.
ದಾಳಿಂಬೆ ಹಣ್ಣಿನಲ್ಲಿ ವಿವಿಧ ಪೋಷಕಾಂಶಗಳು ಅಡಕವಾಗಿದ್ದು ಇದರ ಜ್ಯೂಸ್ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ತೂಕ ಇಳಿಕೆ ಮಾತ್ರವಲ್ಲದೆ ಆರೋಗ್ಯಕ್ಕೆ ಹಲವು ಕೊಡುಗೆಗಳನ್ನು ನೀಡುತ್ತದೆ.
ನೀರಿನ ಅಂಶ ಅಧಿಕವಾಗಿರುವ ಸೌತೆಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ತರಕಾರಿ. ಇದರಲ್ಲಿ ಫೈಬರ್ ಕೂಡ ಅಡಕವಾಗಿದ್ದು ಹೊಟ್ಟೆಯಲ್ಲಿ ಅಡಕವಾಗಿರುವ ಕೊಬ್ಬು ಕರಗಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.