ಮನೆಯ ಹಿತ್ತಲಲ್ಲಿ ಈ ಗಿಡಗಳು ಇದ್ದರೆ ಒಂದೇ ಒಂದು ಹಾವು ಕೂಡ ಆ ಕಡೆ ತಲೆ ಹಾಕಲ್ಲ!

Thu, 11 Jan 2024-9:02 pm,

ಹಾವುಗಳು ಮನೆಯೊಳಗೆ ಬರದಂತೆ ತಡೆಯುವ ಯಾವುದೇ ಸಸ್ಯವಿದೆಯೇ ಎಂದು ಕೇಳಿದರೆ, ಅದಕ್ಕೆ ಹೌದು ಎಂಬುದು ಉತ್ತರ. ಆದರೆ ಅದು ನಿಜ ಎನ್ನುವುದಕ್ಕೆ ಯಾವುದೇ ಘನ ವೈಜ್ಞಾನಿಕ ಪುರಾವೆಗಳಿಲ್ಲ.

ಸರ್ಪಗಂಧ: ಸರ್ಪಗಂಧವು ಅನೇಕ ನೈಸರ್ಗಿಕ ಗುಣಗಳನ್ನು ಅಡಗಿಸಿಕೊಂಡಿರುವ ಸಸ್ಯವಾಗಿದೆ. ಇದರ ಬೇರುಗಳು ಹಳದಿ ಅಥವಾ ಕಂದು ಬಣ್ಣದಲ್ಲಿರುತ್ತವೆ. ಎಲೆಗಳ ಬಣ್ಣವು ಪ್ರಕಾಶಮಾನವಾದ ಹಸಿರು ಬಣ್ಣದ್ದಾಗಿದೆ. ಇದರ ವೈಜ್ಞಾನಿಕ ಹೆಸರು Savulfia serpentina. ಈ ಸಸ್ಯದ ವಾಸನೆಯು ತುಂಬಾ ವಿಚಿತ್ರವಾಗಿರುತ್ತದೆ. ಆದ್ದರಿಂದಲೇ ಹಾವುಗಳು ಇದರ ವಾಸನೆ ಹಿಡಿದ ತಕ್ಷಣ ಓಡಿಹೋಗುತ್ತವೆ ಎಂದು ಹೇಳಲಾಗುತ್ತದೆ.

ಮಗ್ವರ್ಟ್: ಮಗ್ವರ್ಟ್ ಅನ್ನು ಕಳೆ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಗಿಡ ಇದ್ದಲ್ಲಿ, ಹಾವುಗಳು ಬರುವುದಿಲ್ಲ ಎನ್ನಲಾಗುತ್ತದೆ. ಇದಕ್ಕೆ ಕಾರಣ, ಇದರ ವಾಸನೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಸಾಮಾನ್ಯವಾಗಿ ಗಾಢ ವಾಸನೆಯನ್ನು ಹೊಂದಿರುತ್ತದೆ. ಅಂತೆಯೇ ಇದರ ಗಿಡ ಕೂಡ ವಿಚಿತ್ರ ವಾಸನೆ ಹೊರಸೂಸುತ್ತದೆ. ಹುಲ್ಲಿನಂತೆ ಕಾಣುವ ಈ ಗಿಡ ಸುಮಾರು ಒಂದು ಅಡಿ ಎತ್ತರವಿರುತ್ತದೆ. ಇದರ ವಿಶೇಷತೆ ಎಂದರೆ ಈ ಸಸ್ಯವು ಶೀತ ಮತ್ತು ಶಾಖ ಎರಡನ್ನೂ ಚೆನ್ನಾಗಿ ಸಹಿಸಿಕೊಳ್ಳುತ್ತದೆ..

ಡ್ರಾಕೇನಾ ಟ್ರೈಫಾಸಿಯಾಟಾ: ಡ್ರಾಕೇನಾ ಟ್ರೈಫಾಸಿಯಾಟಾ ಅಥವಾ ಮದರ್ ಇನ್ ಲಾ ಟಂಗ್ ಎಂದು ಕರೆಯಲ್ಪಡುವ ಈ ಗಿಡವು ನಾಲಿಗೆಯಂತಹ ಚೂಪಾದ ಮತ್ತು ಮೊನಚಾದ ಎಲೆಯನ್ನು ಹೊಂದಿರುತ್ತದೆ. ಇದನ್ನು ಕಂಡರೆ ಹಾವುಗಳು ಈ ದೂರವಿರುತ್ತವೆ ಎಂದು ಹೇಳಲಾಗುತ್ತದೆ.

ಲೆಮನ್ ಗ್ರಾಸ್: ಇದೊಂದು ಔಷಧೀಯ ಸಸ್ಯ. ಮುಖ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಲೆಮೆನ್ ಗ್ರಾಸ್, ಹೆಸರೇ ಸೂಚಿಸುವಂತೆ ನಿಂಬೆ ವಾಸನೆಯನ್ನು ಹೊಂದಿರುತ್ತದೆ. ಇದನ್ನು ಮನೆಯ ಹಿತ್ತಲಿನಲ್ಲಿ ಬೆಳೆದರೆ ಸಾಕು ಹಾವು, ಸೊಳ್ಳೆಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ.  

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link