Best Scooters 2024: ಬಜೆಟ್ ಬೆಲೆಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳು
ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಇದು ವೇರಿಯೆಂಟ್‌ಗಳಿಗೆ ಅನ್ವಯ 63,060 ದಿಂದ 66,160 ರೂ.(ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 87.8 CC ಸಾಮರ್ಥ್ಯದ ಈ ಸ್ಕೂಟರ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 5.43 PS ಗರಿಷ್ಠ ಶಕ್ತಿ (ಪವರ್) ಹಾಗೂ 6.5 NM ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಸ್ಕೂಟರ್ ಸರಿಸುಮಾರು 50 KMPLವರೆಗೆ ಮೈಲೇಜ್ ನೀಡುತ್ತದೆ. ಹ್ಯಾಲೊಜೆನ್ ಹೆಡ್‌ಲೈಟ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು(DRL), ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಅಲಾರಾಂ, USB ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ.
ನೂತನ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಸ್ಕೂಟರ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 93 ಕೆಜಿ ತೂಕವಿರುವ ಈ ಸ್ಕೂಟರ್ 4.2-ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಅನ್ನು ಒಳಗೊಂಡಿದೆ.
ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ಸಹ ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ. ಇದು 72,614ದಿಂದ 73,417 ರೂ. (ಎಕ್ಸ್ ಶೋರೂಂ) ಬೆಲೆಗೆ ಸಿಗುತ್ತದೆ. 109.7 CC ಏರ್-ಕೋಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಈ ಸ್ಕೂಟರ್, 7.8 PS ಗರಿಷ್ಠ ಶಕ್ತಿ ಮತ್ತು 8.8 NM ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಸ್ಕೂಟಿ 48 KMPLವರೆಗೆ ಮೈಲೇಜ್ ನೀಡುತ್ತದೆ. ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾಟ್ ಬ್ಲ್ಯಾಕ್, ಮ್ಯಾಟ್ ಬ್ಲೂ, ಮ್ಯಾಟ್ ಪರ್ಪಲ್ ಮತ್ತು ಮ್ಯಾಟ್ ರೆಡ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೆ ಸಿಗುತ್ತದೆ. 103 ಕೆಜಿ ತೂಕವಿರುವ ಈ ಸ್ಕೂಟರ್ 5 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್ ಹೊಂದಿದೆ.
ಈ ಹೊಸ ಸ್ಕೂಟಿ ಜೆಸ್ಟ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸಿಂಗಲ್ ಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡ್ರಮ್ ಬ್ರೇಕ್ ಅನ್ನು ಹೊಂದಿದೆ. 10-ಇಂಚಿನ ಸ್ಟೀಲ್ ವೀಲ್‌ಗಳು, ಮುಂದೆ 90/90 ಹಾಗೂ ಹಿಂದೆ 90/100 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಇದು ಒಳಗೊಂಡಿದೆ.