Best Smartphones: 30 ಸಾವಿರ ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಇಲ್ಲಿವೆ ನೋಡಿ

Mon, 01 Aug 2022-1:33 pm,

ಈ ಸ್ಮಾರ್ಟ್ಫೋನ್ ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿಯಾಗಿದೆ. ಇದು ಶಕ್ತಿಯುತವಾದ MediaTek ಡೈಮೆನ್ಸಿಟಿ 1300 ಚಿಪ್‌ಸೆಟ್ ಜೊತೆಗೆ 4500mAh ಬ್ಯಾಟರಿಯನ್ನು ಹೊಂದಿದೆ. ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ 80W Supervooc ಚಾರ್ಜಿಂಗ್ ಬೆಂಬಲ ಹೊಂದಿದೆ.Reno8 90Hz ರಿಫ್ರೆಶ್ ರೇಟ್‍ನೊಂದಿಗೆ 6.43-ಇಂಚಿನ ಪೂರ್ಣ HD + AMOLED ಡಿಸ್ಪ್ಲೇಯನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ರೂಪಾಂತರದ ಫೋನಿಗೆ 29,999 ರೂ. ಇದೆ. 8 GB RAM | 128 GB ROM ಜೊತೆಗೆ 16.33 ಸೆಂ (6.43 ಇಂಚು) ಪೂರ್ಣ ಎಚ್ಡಿ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‍ಫೋನ್‍, 50MP + 8MP + 2MP | 32MP ಮುಂಭಾಗದ ಕ್ಯಾಮೆರಾ ಹೊಂದಿದೆ.

ಈ ಫೋನ್‌ನಲ್ಲಿ MediaTek's Dimensity 8100, 6.6-ಇಂಚಿನ LCD ಜೊತೆಗೆ ಅಡಾಪ್ಟಿವ್ 144Hz ರಿಫ್ರೆಶ್ ರೇಟ್ ಮತ್ತು 67W ಫಾಸ್ಟ್ ಚಾರ್ಜಿಂಗ್ ಜೊತೆಗೆ 5,080 mAh ಬ್ಯಾಟರಿ ಅಳವಡಿಸಲಾಗಿದೆ. 6 GB+128 GB ರೂಪಾಂತರಕ್ಕೆ Mi ವೆಬ್‌ಸೈಟ್‌ನಲ್ಲಿ 25,999 ರೂ. ಇದೆ.  OIS ಜೊತೆಗೆ 64 MP + 8 MP + 2 MP ಟ್ರಿಪಲ್ ಹಿಂಬದಿಯ ಕ್ಯಾಮೆರಾ, 16 MP ಮುಂಭಾಗದ ಕ್ಯಾಮೆರಾ, 2.85 GHz, ಆಕ್ಟಾ ಕೋರ್ ಪ್ರೊಸೆಸರ್, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5ಯನ್ನು ಹೊಂದಿರುತ್ತದೆ.

ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ ಅಲ್ಟ್ರಾ-ಫಾಸ್ಟ್, ಸೂಪರ್ ಸ್ಥಿರ ಮತ್ತು ಮೃದುವಾದ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ಇದು 64MP ಪ್ರೈಮರಿ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 80W ಫಾಸ್ಟ್ ಚಾರ್ಜಿಂಗ್ ಆಯ್ಕೆಯೊಂದಿಗೆ 4700mAh ಬ್ಯಾಟರಿ ಹೊಂದಿದೆ. 29,999 ರೂ.ಗೆ ಇದು ನಿಮಗೆ ಸಿಗುತ್ತದೆ. ‎ಇದು 64MP + 8MP ಹಿಂದಿನ ಕ್ಯಾಮರಾ (ವೈಡ್ ಆಂಗಲ್) + 2MP (ಮ್ಯಾಕ್ರೋ) ಮತ್ತು 16MP ಮುಂಭಾಗ ಕ್ಯಾಮೆರಾ ಹೊಂದಿದೆ. Snapdragon® 870 5G ಮೊಬೈಲ್ ಪ್ಲಾಟ್‌ಫಾರ್ಮ್ – ಪ್ರೊಸೆಸರ್ ಹೊಂದಿರುವ ಈ ಫೋನು 8GB/12GB RAM ಮತ್ತು 128GB/256GB ROM ಹೊಂದಿದೆ. ಡಾರ್ಕ್ ನೋವಾ, ಸೈಬರ್ ರೇಜ್ ಮತ್ತು ಮೇವರಿಕ್ ಆರೆಂಜ್ ಬಣ್ಣಗಳಲ್ಲಿ ಈ ಫೋನು ಲಭ್ಯವಿದೆ.

Poco F4 ಫೋನು Qualcomm Snapdragon 870 5G ಚಿಪ್‌ಸೆಟ್, 64MP ಮುಖ್ಯ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 20 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು 6.67-ಇಂಚಿನ ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್‍ಅನ್ನು ಹೊಂದಿದೆ. ಫ್ಲಿಪ್‌ಕಾರ್ಟ್‌ನಲ್ಲಿ 27,999 ರೂ.ಗೆ ಲಭ್ಯವಿರುವ ಈ ಫೋನು 6 GB RAM ಮತ್ತು 128 GB ROM ಹೊಂದಿದೆ. 16.94 cm (6.67 ಇಂಚು) Full HD+ ಡಿಸ್ಪ್ಲೇ, 64MP + 8MP + 2MP | 20MP ಮುಂಭಾಗದ ಕ್ಯಾಮೆರಾ, 4500 mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ಮತ್ತು Qualcomm Snapdragon 870 ಪ್ರೊಸೆಸರ್‍ನಲ್ಲಿ ಈ ಸ್ಮಾರ್ಟ್‍ಫೋನ್ ಕಾರ್ಯನಿರ್ವಹಿಸುತ್ತದೆ.

Xiaomi 11i Hypercharge 30 ಸಾವಿರ ರೂ.ಗಿಂತ ಕಡಿಮೆ ಬೆಲೆಯ ಅತ್ಯತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇದು 120W ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಬರುತ್ತದೆ. ಇದು 6.67-ಇಂಚಿನ FHD+AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್‍ ಹೊಂದಿದೆ. 26,999 ರೂ. ಬೆಲೆಯ ಈ ಫೋನು 6/8 GB RAM | 128 GB ROM | 1 TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಸ್ಪೇಸ್ ಹೊಂದಿದೆ. 16.94 ಸೆಂ (6.67 ಇಂಚು) Full HD+ AMOLED ಡಿಸ್ಪ್ಲೇ, 108MP + 8MP + 2MP | 16MP ಮುಂಭಾಗದ ಕ್ಯಾಮೆರಾ, 4500 mAh ಲಿ-ಪಾಲಿಮರ್ ಬ್ಯಾಟರಿ ಹೊಂದಿರುವ ಈ ಫೋನು ಮೀಡಿಯಾಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್‍ನಲ್ಲಿ ಕಾರ್ಯನಿರ್ವಹಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link