ಗ್ಯಾಸ್ಟ್ರಿಕ್, ಎದೆಯುರಿ ಸಮಸ್ಯೆಯಿಂದ ಪರಿಹಾರಕ್ಕಾಗಿ ಬೇಸಿಗೆಯಲ್ಲಿ ತಪ್ಪದೇ ಸೇವಿಸಿ ಈ 5 ತರಕಾರಿ
ನೀವು ಗ್ಯಾಸ್ಟ್ರಿಕ್, ಎದೆಯುರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಹೌದು, ಎಂದಾದರೆ, ಬೇಸಿಗೆಯಲ್ಲಿ ಈ 5 ತರಕಾರಿಗಳನ್ನು ಸೇರಿಸಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ಆ ತರಕಾರಿಗಳು ಯಾವುವೆಂದರೆ...
ಬಾಟಲ್ ಸೋರೆಕಾಯಿ ರುಚಿಕರವಾದ ತರಕಾರಿ ಮಾತ್ರವಲ್ಲ, ಇದಾರಲ್ಲಿರುವ ನೀರು ಮತ್ತು ಫೈಬರ್ ಜೀರ್ಣಕ್ರಿಯೆಗೆ ತುಂಬಾ ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ಈ ತರಕಾರಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಕೆಲವರು ಹಾಗಲಕಾಯಿ ತಿನ್ನುವುದಿಲ್ಲ. ಆದರೆ, ಹಾಗಲಕಾಯಿಯಲ್ಲಿರುವ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಗುಣ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಸುಲಭ ಪರಿಹಾರ ನೀಡಬಲ್ಲದು.
ಪಾಲಕ್ ಸೊಪ್ಪು ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಉತ್ತಮ ಪ್ರಮಾಣದ ಫೈಬರ್ ಅನ್ನು ಕೂಡ ಒಳಗೊಂಡಿದೆ. ಬೇಸಿಗೆಯಲ್ಲಿ ಪಾಲಕ್ ಸೊಪ್ಪಿನ ಬಳಕೆಯಿಂದ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ದೂರ ಉಳಿಯಬಹುದು.
ಸೌತೆಕಾಯಿಯಲ್ಲಿ ನೀರು ಮತ್ತು ಖನಿಜಗಳು ಹೇರಳವಾಗಿದ್ದು, ಬೇಸಿಗೆಯಲ್ಲಿ ಇದರ ಬಳಕೆಯೂ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಟೊಮೆಟೊದಲ್ಲಿರುವ ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದಲ್ಲದೆ, ಇದು ಹೊಟ್ಟೆ ಹುಣ್ಣಿನ ಸಮಸ್ಯೆಗೂ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.