ತಲೆದಿಂಬಿನ ಕೆಳಗೆ ಈ ಎಲೆಯನ್ನು ಇಟ್ಟುಕೊಂಡು ಮಲಗಿದರೆ ಧನ ಲಾಭ, ನೆಮ್ಮದಿ ಲಭಿಸುತ್ತದೆ..!

Fri, 29 Mar 2024-8:29 pm,

ಪ್ರತಿಯೊಂದು ಗ್ರಹವು ನಮ್ಮ ಜೀವನದಲ್ಲಿ ಕೆಲವು ಘಟನೆಗಳೊಂದಿಗೆ ಸಂಬಂಧ ಹೊಂದಿದೆ. ಇಂದು ನಾವು ಬುಧ ಗ್ರಹದ ಬಗ್ಗೆ ತಿಳಿಯೋಣ. ಜಾತಕದಲ್ಲಿ ಬುಧ ಬಲಗೊಳ್ಳಲು ಕ್ರಮಗಳನ್ನು ಕೈಗೊಂಡರೆ, ಬುದ್ಧಿವಂತಿಕೆಯು ಹೆಚ್ಚಾಗುತ್ತದೆ ಮತ್ತು ವೃತ್ತಿಪರ ವ್ಯವಹಾರದಲ್ಲಿ ನಾವು ಯಶಸ್ವಿಯಾಗುತ್ತೇವೆ.  

ವೀಳ್ಯದೆಲೆಯನ್ನು ನಮ್ಮ ಮನೆಗಳಲ್ಲಿ ಪ್ರತಿಯೊಂದು ಶುಭ ಕಾರ್ಯದಲ್ಲಿ ಬಳಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ವೀಳ್ಯದೆಲೆ ಇಲ್ಲದೆ ಪೂಜೆ ಮಾಡುವುದಿಲ್ಲ. ಇದಕ್ಕೆ ವಿಶೇಷ ಸ್ಥಾನವಿದೆ. ವೀಳ್ಯದೆಲೆ ವಿಶೇಷವಾಗಿ ಬುಧಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಕೆಲವು ಭಾಗಕ್ಕೆ ಸಂಬಂಧಿಸಿವೆ. ಬುಧವು ನಮ್ಮ ಭುಜ, ಕುತ್ತಿಗೆ ಮತ್ತು ಚರ್ಮಕ್ಕೆ ಸಂಬಂಧಿಸಿದ್ದಾಗಿದೆ.  

ನಮ್ಮ ಜಾತಕದಲ್ಲಿ ಬುಧ ಗ್ರಹವು ಉತ್ತಮವಾಗಿದ್ದರೆ, ಬುದ್ಧಿವಂತಿಕೆಯು ತೀಕ್ಷ್ಣವಾಗಿರುತ್ತದೆ. ಬುಧವು ಬುದ್ಧಿಶಕ್ತಿಗೆ ಕಾರಣ. ಈ ಗ್ರಹವು ಉತ್ತಮವಾಗಿದ್ದರೆ, ವೃತ್ತಿಪರ ವ್ಯವಹಾರದಲ್ಲಿ ಯಶಸ್ಸು ಇರುತ್ತದೆ. ತಲೆದಿಂಬಿನ ಕೆಳಗೆ ವೀಳ್ಯದೆಲೆ ಇಟ್ಟುಕೊಂಡು ಮಲಗಿದರೆ ಏನಾಗುತ್ತದೆ.. ಬನ್ನಿ ತಿಳಿದುಕೊಳ್ಳೋಣ.  

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಲೆದಿಂಬಿನ ಕೆಳಗೆ ವೀಳ್ಯದೆಲೆ ಇಟ್ಟು ಮಲಗಿದರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಇದರಿಂದ ತೀವ್ರ ಒತ್ತಡದಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಬುಧ ಗ್ರಹ ಸಹ ನಮಗೆ ಅದೃಷ್ಟವನ್ನು ನೀಡುತ್ತವೆ. ಹೀಗೆ ಮಾಡುವುದರಿಂದ ಮನಸ್ಸು ಕೂಡ ರಿಲ್ಯಾಕ್ಸ್ ಆಗುತ್ತದೆ, ಚೆನ್ನಾಗಿ ನಿದ್ರೆ ಬರುತ್ತದೆ..   

ರಾತ್ರಿ ಮಲಗುವ ಮುನ್ನ ವೀಳ್ಯದೆಲೆಯನ್ನು ದಿಂಬಿನ ಕೆಳಗೆ ಇಡುವ ಮೊದಲು ಎಲೆಯನ್ನು ಗಂಗಾಜಲ ಅಥವಾ ತುಳಸಿ ನೀರಿನಲ್ಲಿ ನೆನೆಸಿಡಿ. ಆ ನಂತರ ಕೆಂಪು ಬಟ್ಟೆಯಲ್ಲಿ ಸುತ್ತಿ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ. ಈ ಪರಿಹಾರವು ತುಂಬಾ ಪರಿಣಾಮಕಾರಿಯಾಗಿದೆ. (ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ಪರಿಶೀಲಿಸಿಲ್ಲ.)    

ZEENEWS TRENDING STORIES

By continuing to use the site, you agree to the use of cookies. You can find out more by Tapping this link