ವೀಳ್ಯದೆಲೆ ಜೊತೆಗೆ ಇದನ್ನು ಬೆರೆಸಿ ತಿಂದರೆ ಯೂರಿಕ್ ಆಸಿಡ್ ಕರಗಿಸಿ ನೀರಾಗುತ್ತದೆ ! ಆದರೆ ಹೀಗೆಯೇ ಮತ್ತು ಇಷ್ಟೇ ತಿನ್ನಬೇಕು
ವೀಳ್ಯದೆಲೆಯ ಸೇವನೆಯು ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಪ್ರಯೋಜನಕಾರಿಯಾಗಿದೆ. ವೀಳ್ಯದೆಲೆಯು ಹೈಪರ್ಯುರಿಸೆಮಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಅದರ ಸಾರವನ್ನು ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವೀಳ್ಯದೆಲೆ ಮತ್ತು ಸುಣ್ಣವನ್ನು ಸೇವಿಸುವುದರಿಂದ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ಹೋಗಲಾಡಿಸಬಹುದು. ಹೆಚ್ಚುತ್ತಿರುವ ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ.ಇದಕ್ಕಾಗಿ ವೀಳ್ಯದೆಲೆಗೆ ಚಿಟಿಕೆ ಸುಣ್ಣವನ್ನು ಸೇರಿಸಿ ಜಗಿಯಬಹುದು.
ವೀಳ್ಯದೆಲೆ ಮತ್ತು ಹಸಿರು ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ, ಒಂದು ಹಸಿರು ಏಲಕ್ಕಿಯೊಂದಿಗೆ ವೀಳ್ಯದೆಲೆಯನ್ನು ಅಗಿಯಬಹುದು. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು, ವೀಳ್ಯದೆಲೆಯಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು.ಇದಕ್ಕಾಗಿ 2 ರಿಂದ 3 ವೀಳ್ಯದೆಲೆಗಳನ್ನು ತೆಗೆದುಕೊಂಡು ಸುಮಾರು 2 ರಿಂದ 3 ಕಪ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಯೂರಿಕ್ ಆಸಿಡ್ ಕಡಿಮೆ ಮಾಡಲು ಏನನ್ನೂ ಸೇರಿಸದೆ ಹಸಿ ವೀಳ್ಯದೆಲೆಗಳನ್ನು ಕೂಡಾ ಸೇವಿಸಬಹುದು.ಇದು ಕೂಡಾ ದೇಹದಲ್ಲಿನ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ವೀಳ್ಯದೆಲೆಗಳನ್ನು ಅಗಿಯಲು ಅಥವಾ ಕಷಾಯವನ್ನು ಕುಡಿಯಲು ಸಾಧ್ಯವಾಗದಿದ್ದರೆ, ವೀಳ್ಯದೆಲೆಯ ಮಾತ್ರೆಗಳನ್ನು ತಯಾರಿಸಿ ನುಂಗಬಹುದು. ಇದಕ್ಕಾಗಿ ವೀಳ್ಯದೆಲೆಯನ್ನು ಅರೆದು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)