‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ನವೀನ್ ಕೃಷ್ಣ ತಂದೆ ಯಾರು ಗೊತ್ತಾ? ಕನ್ನಡದ 300 ಸಿನಿಮಾಗಳಲ್ಲಿ ನಟಿಸಿದ ಫೇಮಸ್ ನಟ ಇವರು

Wed, 03 Jan 2024-10:05 pm,

ಭೂಮಿಗೆ ಬಂದ ಭಗವಂತ’ ಧಾರಾವಾಹಿಯು ಮಧ್ಯಮ ವರ್ಗದ ಕುಟುಂಬದ ಬಗ್ಗೆ ತೋರಿಸಿದರೂ, ಅದರ ಜೊತೆಗೆ ದೇವರ ಮೇಲಿನ ನಂಬಿಕೆ ಅವರನ್ನು ಯಾವ ರೀತಿ ಕೈಹಿಡಿಯುತ್ತದೆ ಎಂಬ ವಿಚಾರವನ್ನು ಪ್ರಸ್ತುತ ಜಗತ್ತಿಗೆ ಹೊಂದಿಕೊಳ್ಳುವಂತೆ ಅನಾವರಣ ಮಾಡಲಾಗುತ್ತಿದೆ.

ಇನ್ನು ಈ ಧಾರಾವಾಹಿಯಲ್ಲಿ ಶಿವಪ್ರಸಾದ್ ಎಂಬ ಪಾತ್ರಕ್ಕೆ ಜೀವ ತುಂಬುತ್ತಿರುವ ನವೀನ್ ಕೃಷ್ಣ ಬಗ್ಗೆ ನಿಮಗೆ ತಿಳಿದಿರದ ಒಂದು ಸತ್ಯ ಸಂಗತಿ ಬಗ್ಗೆ ಮಾಹಿತಿ ನೀಡಲಿದ್ದೇವೆ.

ನವೀನ್ ಕೃಷ್ಣ ಅವರು ನಟ, ನಿರ್ದೇಶಕ ಮತ್ತು ಬರಹಗಾರರು. ಬಾಲನಟನಾಗಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ ಅವರು,  ಶ್ರೀರಸ್ತು ಶುಭಮಸ್ತು (2000) ಸಿನಿಮಾದ ಮೂಲಕ ಅಧಿಕೃತವಾಗಿ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.

ಕದಂಬ (2004), ನೆನಪಿರಲಿ (2005) ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನವೀನ್ ಕೃಷ್ಣ, ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದ ನವೀನ್ ಕೃಷ್ಣ ಅವರ ತಂದೆ ಸ್ಯಾಂಡಲ್ವುಡ್’ನ ಪ್ರಖ್ಯಾತ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ಮಗ.

ಇನ್ನು ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ತಮ್ಮ ಹೆಸರನ್ನು ಅಕ್ಷಯ್ ಕೃಷ್ಣ ಎಂದು, ಅದಾದ ನಂತರ S. S. ಕೃಷ್ಣ ಎಂದು ಎರಡು ಬಾರಿ ಬದಲಾಯಿಸಿಕೊಂಡಿದ್ದರು. ಆದರೆ ಅದರಿಂದ ಏನೂ ಪ್ರಯೋಜನ ಆಗದ ಕಾರಣ, ತಮ್ಮ ಮೂಲ ಹೆಸರನ್ನೇ ಇಟ್ಟುಕೊಂಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link