Bigg Boss: ಮತ್ತೆ ಬರ್ತಿದೆ ಬಿಗ್ ಬಾಸ್ ಹೊಸ ಸೀಸನ್… ಈ ದಿನದಂದು ಆರಂಭ: ದಕ್ಷಿಣ ಭಾರತದ ಈ ಪ್ರಖ್ಯಾತ ನಟನೇ ನಿರೂಪಕ!

Sun, 25 Feb 2024-7:16 pm,

ಬಿಗ್ ಬಾಸ್ ಹೊಸ ಸೀಸನ್ ಮತ್ತೆ ಶುರುವಾಗುತ್ತಿದೆ. ಆದರೆ ನಾವಿಂದು ಮಾತನಾಡುತ್ತಿರುವುದು ಕನ್ನಡ ಸೀಸನ್ ಬಗ್ಗೆ ಅಲ್ಲ, ಬದಲಾಗಿ ಮಲಯಾಳಂ ಬಗ್ಗೆ. ಬಿಗ್ ಬಾಸ್ ಮಲಯಾಳಂನ ಸೀಸನ್ 6 ರ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಂದಿದೆ.

ಬಿಗ್ ಬಾಸ್ ಮಲಯಾಳಂ ಸೀಸನ್ 6 ಆರಂಭಗೊಳ್ಳಲು ಸಿದ್ಧವಾಗಿದೆ. ತಯಾರಕರು ಹೊಸ ಸೀಸನ್‌’ನ ಗ್ರ್ಯಾಂಡ್ ಲಾಂಚ್ ಅನ್ನು ಅಧಿಕೃತವಾಗಿ ಘೋಷಿಸಿದ್ದಾರೆ..

ಬಿಗ್ ಬಾಸ್ ಮಲಯಾಳಂ 6 ರ ಪ್ರೋಮೋ ವೀಡಿಯೊವನ್ನು ತಯಾರಕರು ಹಂಚಿಕೊಂಡಿದ್ದಾರೆ. ಪ್ರೋಮೋದಲ್ಲಿ, ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್ ದಿನಾಂಕವನ್ನು ಅನಾವರಣಗೊಳಿಸಲಾಗಿದೆ.

ಮಾರ್ಚ್ 10 ರಂದು ಸಂಜೆ 7 ಗಂಟೆಗೆ ಪ್ರಸಾರವಾಗಲಿದ್ದು, ದಕ್ಷಿಣದ ಖ್ಯಾತ ನಟ ಮೋಹನ್ ಲಾಲ್ ಹೋಸ್ಟ್ ಮಾಡಲಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ನಯನಾ ಜೋಸನ್, ಯಮುನಾ ರಾಣಿ, ರಾಜೀವ್ ಪರಮೇಶ್ವರ, ರಾಧಿಕಾ ನಾಯರ್, ಜಯಂತಿ, ಅಪ್ಸರಾ, ಕುಟುಂಬವಿಲಕ್ ಖ್ಯಾತಿಯ ಶರಣ್ಯ ಆನಂದ್, ನಟ ಕೃಷ್ಣ ಮತ್ತು ಮುದಿಯನ್ ಅಲಿಯಾಸ್ ರಿಷಿ ಕುಮಾರ್, ಲಿಯಾಂಡ್ರಾ ಮಾರಿಯಾ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link