BBK 11: ಮೊದಲ ವಾರದಲ್ಲೆ ಬಿಗ್‌ಬಾಸ್ ಮನೆಯಲ್ಲಿ ಕಿಡಿ! ಅರ್ಧಕ್ಕೆ ಅರ್ಧ ಮನೆ ನಾಮಿನೇಟೆಡ್..ಮನೆಯಿಂದ ಔಟ್ ಆಗೋರ್ಯಾರು?
Bigboss kannada 11: ಬಿಗ್‌ಬಾಸ್ ಸೀಸನ್ 11 ಶುರುವಾಗಿ ಕೇವಲ ಮೂರು ದಿನ ಕಳೆದಿದೆ, ಅಷ್ಟರೆಲ್ಲೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಬಿನ್ನಾಭಿಪ್ರಾಯ ಶುರುವಾಗಿದೆ, ಎಲ್ಲಾ ಭಾರಿಯಂತೆ ಅಲ್ಲದೆ ಈ ಭಾರಿ ಬಿಗ್ ಬಾಸ್ ಮನೆಯಲ್ಲಿ ಓಪನ್ ನಾಮಿನೇಷನ್ ಮಾಡಲಾಗಿತ್ತು. ಇದರಲ್ಲಿ ಅರ್ಧಕ್ಕೆ ಅರ್ಧ ಮನೆಯೇ ನಾಮಿನೇಟ್ ಆಗಿದೆ.
ಮೊದಲನೇ ಹಂತದಲ್ಲಿಯೇ ಚೈತ್ರ ಕುಂದಾಪುರ ನೇರವಾಗಿ ನಾಮಿನೇಟ್ ಆಗಿದ್ದು, ಎರಡನೇ ಹಂತದಲ್ಲಿ ಮನೆಯ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಒಟ್ಟು 10 ಜನರು ಮೊದಲ ವಾರನೇ ನಾಮಿನೇಟ್ ಆಗಿದ್ದು, ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎನ್ನು ಚರ್ಚೆ ಇದೀಗ ಶುರುವಾಗಿದೆ.
ರೂಲ್ಸ್ ಬ್ರೇಕ್ ಮಾಡಿದ್ದ ಕಾರಣಕ್ಕೆ ಇತರ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಚೈತ್ರ ಕುಂದಾಪುರ ಅವರನ್ನು ಹೆಚ್ಚು ಜನ ನಾಮಿನೇಟ್ ಮಾಡಿದರು.
ಮೊದಲನೇ ಹಂತದಲ್ಲೆ ನಾಮನೇಟ್ ಆದ ಚೈತ್ರ ಕುಂದಾ ಪುರ ಅವರನ್ನು ಹೊರತು ಪಡಿಸಿ, ಪ್ರತಿ ಒಂದು ಹಂತದಲ್ಲಿ ಮನೆಯ 2 ಸ್ಪರ್ಧಿಗಳು ನಾಮಿನೇಟ್ ಆದರು.
ಮೊದಲ ಸುತ್ತಿನ ಟಾಸ್ಕ್‌ನಲ್ಲಿ ಗೌತಮಿ ಜಾಧವ್-ಯಮುನಾ ಶ್ರೀನಿಧಿ ಮತ್ತು ಲಾಯರ್ ಜಗದೀಶ್‌ರನ್ನ ನಾಮಿನೇಟ್ ಮಾಡಿದರು.
ನಂತರ ಟಾಸ್ಕ್‌ನಲ್ಲಿ ಗೆದ್ದ ಅನುಷಾ ಸೇಫ್ ಆಗುವ ಮೂಲಕ. ಇವರ ವಿರುದ್ಧ ಸೋತ ಮೋಕ್ಷಿತಾ ಪೈ ನೇರವಾಗಿ ನಾಮಿನೇಟ್ ಆದರು.
ಇನ್ನೂ ನಾಮಿನೇಟ್ ಆಗಿರುವವರು ಪೈಕಿ, ಇದೀಗ ಸ್ವರ್ಗವಾಸಿಗಳಾದ ಲಾಯರ್ ಜಗದೀಶ್, ಗೌತಮಿ ಜಾಧವ್, ಹಂಸ, ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ನಾಮಿನೇಟ್ ಆಗಿದ್ದಾರೆ.
ಇನ್ನೂ, ನರಕವಾಸಿಗಳ ಪೈಕಿ ಶಿಶಿರ್ ಶಾಸ್ತ್ರಿ, ಚೈತ್ರಾ ಕುಂದಾಪುರ, ಮಾನಸಾ ಹಾಗೂ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದು, ಮೊದಲ ವಾರವೇ ಮನೆಯಿಂದ 10 ಜನ ನಾಮಿನೇಟ್ ಆಗಿದ್ದಾರೆ.