BBK 11: ಒಮ್ಮೆ ಹಾಕಿದ ಬಟ್ಟೆಯನ್ನ ಮತ್ತೆ ರಿಪೀಟ್‌ ಮಾಡಲ್ಲ ಬಿಗ್‌ ಬಾಸ್‌ನ ಈ ಸ್ಪರ್ಧಿ...! ಈಕೆ ಬಳಿ ಇದೆಯಂತೆ ಬರೋಬ್ಬರಿ 3,000 ಜೊತೆ ಬಟ್ಟೆ!

Tue, 26 Nov 2024-7:12 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಯಾರು ಯಾರಿಗೆ ಕಮ್ಮಿಯಿಲ್ಲ ಎನ್ನುವಂತೆ ಆಟವಾಡುತ್ತಿದ್ದಾರೆ. ಮಾತಿಗೆ ಮಾತು, ಆಟಕ್ಕೆ ಆಟ ಎನ್ನುವಂತೆ ಒಬ್ಬರಿಗಿಂತ ಒಬ್ಬರು ಪಂಟರೇ ಇದ್ದಾರೆ ಈ ಬಾರಿಯ ದೊಡ್ಮನೆಯಲ್ಲಿ.

ಅದರಲ್ಲೂ ಹೆಣ್ಮಕ್ಕಳು ಕೂಡ ಸಖತ್‌ ಎಂಟರ್ಟೈನ್ಮೆಂಟ್‌ ನೀಡುತ್ತಿದ್ದು ಪುರುಷ ಸ್ಪರ್ಧಿಗಳಿಗಿಂತ ನಾವೇನು ಕಮ್ಮಿಯಿಲ್ಲ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ.

 

ಅಂದಹಾಗೆ ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿ ಓರ್ವ ಮಹಿಳಾ ಸ್ಪರ್ಧಿಯಿದ್ದು ಈಕೆಯ ಬಳಿ ಬರೋಬ್ಬರಿ 3000 ಬಟ್ಟೆಗಳಿವೆಯಂತೆ. ಹೀಗಂತ ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

ಆ ಸ್ಪರ್ಧಿ ಬೇರಾರು ಅಲ್ಲ ಭವ್ಯ ಗೌಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿ ಮೂಲಕ ವೀಕ್ಷಕರ ಮನ ಗೆದ್ದಿದ್ದ ಭವ್ಯಾ ಈಗ ಬಿಗ್‌ ಬಾಸ್‌ನಲ್ಲಿಯೂ ಎಲ್ಲರ ಮನಗೆಲ್ಲುತ್ತಿದ್ದಾರೆ.

 

ಭವ್ಯಾ ಗೌಡ ಅವರ ಬಗ್ಗೆ ಯಾರಿಗೂ ಗೊತ್ತಿಲ್ಲದ ಸಂಗತಿಯನ್ನು ಬಹಿರಂಗಪಡಿಸಿದ್ದು ಇನ್‌ ಹೌಸ್ ನಿರೂಪಕ ಅಕುಲ್ ಬಾಲಾಜಿ. ಗೀತಾ ಸೀರಿಯಲ್‌ ಸೆಟ್‌ನಲ್ಲಿ ಒಂದು ದಿನವೂ ಧರಿಸಿದ ಬಟ್ಟೆಯನ್ನು ರಿಪೀಟ್‌ ಮಾಡಿರಲಿಲ್ಲವಂತೆ ಭವ್ಯಾ.

 

ಈ ಬಗ್ಗೆ ಅಕುಲ್‌ ಭವ್ಯಾ ಬಳಿ ಪ್ರಶ್ನೆ ಮಾಡಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ನಟಿ, "ನನ್ನ ಬಳಿ ಈಗಾಗಲೇ ಮೂರು ಸಾವಿರ ಬಟ್ಟೆಗಳಿವೆ. ಇನ್ಮು ಹೊಸ ಬಟ್ಟೆ ತೆಗೆದುಕೊಂಡು ಬಂದರೆ, ನಿನ್ನನ್ನು ಮನೆಯಿಂದ ಹೊರಹಾಕ್ತೀನಿ ಅಂತಾ ಅಮ್ಮ ಹೇಳಿದ್ದಾರೆ. ಆದರೆ ನನ್ನ ಕೆಲಸವೇ ಹಾಗೆ, ಏನು ಮಾಡಲಿ? ಬಟ್ಟೆ ಬೇಕಾಗುತ್ತೆ" ಎಂದಿದ್ದಾರೆ ಭವ್ಯಾ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link