ಧರ್ಮ ಕೀರ್ತಿರಾಜ್‌ ಮದುವೆ ಮುರಿದು ಬೀಳಲು ಏನು ಕಾರಣ? ಅನುಷಾ ಜೊತೆಗಿನ ಬ್ರೇಕಪ್‌ ಬಗ್ಗೆ ಬಿಚ್ಚಿಟ್ರು ಸತ್ಯ!

Tue, 26 Nov 2024-3:50 pm,

ನಟ ಧರ್ಮ ಕೀರ್ತಿರಾಜ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಎಲಿಮಿನೇಟ್‌ ಆಗಿದ್ದು ಇದೀಗ ಅನುಷಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಮನೆಗೆ ಧರ್ಮ ಕೀರ್ತಿರಾಜ್‌ ಮತ್ತು ಅನುಷಾ ರೈ ಒಟ್ಟಿಗೆ ಎಂಟ್ರಿ ಕೊಟ್ಟಿದ್ದರು. ಹಿಂದಿನ ವಾರ ಅನುಷಾ ರೈ ಔಟ್‌ ಆಗಿದ್ದರು, ಅದರ ಬಳಿಕ ಧರ್ಮ ಕೀರ್ತಿರಾಜ್‌ ಹೊರ ಬಂದಿದ್ದಾರೆ. 

ನವಗ್ರಹ ಸಿನಿಮಾ ಮೂಲಕ ಖ್ಯಾತಿ ಪಡೆದ ಧರ್ಮ ಕೀರ್ತಿರಾಜ್ ಬಿಗ್‌ ಬಾಸ್‌ ಕನ್ನಡ ಮನೆಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. 

ಧರ್ಮ ಕೀರ್ತಿರಾಜ್‌ ಮತ್ತು ಅನುಷಾ ರೈ ನಡುವೆ ಪ್ರೀತಿ ಇತ್ತು. ಇಬ್ಬರೂ ರಿಲೇಶನ್‌ಶಿಪ್‌ನಲ್ಲಿದ್ದರು ಆದರೆ ಕೆಲ ವರ್ಷಗಳ ಹಿಂದೆ ಸಂಬಂಧ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಖುದ್ದು ಧರ್ಮ ಮಾತನಾಡಿದ್ದಾರೆ.

ಅನುಷಾ ನನ್ನ ಮಧ್ಯೆ ಲವ್‌ ಅಂತೇನಿಲ್ಲ. ನಾವಿಬ್ಬರೂ ಗುಡ್‌ ಫ್ರೆಂಡ್ಸ್‌. ಆದರೆ ನಮ್ಮ ಮಧ್ಯೆ ಸ್ವಲ್ಪ ಮಿಸ್‌ ಅಂಡರ್‌ಸ್ಟಾಂಡಿಂಗ್‌ ಬಂದಿತ್ತು. ಬಳಿಕ ಕೊರೊನಾ ಬಂತು ಆಗ ಭೇಟಿ ಆಗಲೇ ಇಲ್ಲ ಎಂದು ಹೇಳಿದರು. 

ಬಳಿಕ ಮತ್ತೊಂದು ಸಿನಿಮಾ ಒಟ್ಟಾಗಿ ಮಾಡಿದೆವು. ಸ್ನೇಹಿತರಾಗಿದ್ದೆವು ಅಷ್ಟೇ. ನಂತರ ನಾವು ಅಷ್ಟೊಂದು ಟಚ್‌ನಲ್ಲೂ ಇರಲಿಲ್ಲ. ನಾನು ಅವರ ಬರ್ತ್‌ ಡೇ ದಿನ ಭೇಟಿ ಆಗಿದ್ದೆವು ಎಂದು ಧರ್ಮ ಹೇಳಿದ್ದಾರೆ. 

ಈಗ ಬಿಗ್‌ ಬಾಸ್‌ ಮನೆಯಲ್ಲಿ ಒಳ್ಳೆಯ ಕನೆಕ್ಟ್‌ ಆಯ್ತು. ಮತ್ತೆ ಒಂದು ಫ್ರೆಂಡ್‌ ಶಿಪ್‌ ಬೆಳೆಯಿತು. ಮತ್ತೆ ನಾವು ಉತ್ತಮ ಸ್ನೇಹಿತರಾದೆವು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ ಎಂದಿದ್ದಾರೆ. 

ಧರ್ಮ ಕೀರ್ತಿರಾಜ್‌ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದು, ಎರಡು ಮೂರು ವರ್ಷಗಳ ಹಿಂದೆ ನನ್ನ ಮದುವೆ ನಡೆಯಬೇಕಿತ್ತು. ಎಲ್ಲ ರೀತಿಯಲ್ಲೂ ಪ್ಲಾನ್‌ ಆಗಿತ್ತು. ಆದರೆ ಕಾರಣಾಂತರಗಳಿಂದ ಕೊನೆಯ ಕ್ಷಣದಲ್ಲಿ ಮದುವೆ ನಡೆಯಲಿಲ್ಲ ಎಂದು ಧರ್ಮ ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link