ಬಿಗ್ ಬಾಸ್‌ನಲ್ಲಿ ಹೊಡೆದಾಡಿ ಹೊರಬಿದ್ದಿದ್ದಾರೆ ಎನ್ನಲಾದ ಲಾಯರ್ ಜಗದೀಶ್ ಪತ್ನಿ ಹೇಗಿದ್ದಾರೆ ಗೊತ್ತಾ? ʼಸೌಮ್ಯʼ ಸ್ವಭಾವದ ಈಕೆ ಪತಿಯಂತೆ ಫೇಮಸ್ ವ್ಯಕ್ತಿ
ಲಾಯರ್ ಜಗದೀಶ್.. ಸದ್ಯ ಬಿಗ್ ಬಾಸ್ ಮನೆಯಲ್ಲಿ ಭಾರೀ ಗದ್ದಲ ಸೃಷ್ಟಿಸುತ್ತಿರುವ ಸ್ಪರ್ಧಿ ಎನ್ನಬಹುದು. ಆದರೆ ಇದೀಗ ಇವರು ಸಹಸ್ಪರ್ಧಿ ರಂಜಿತ್ ಜೊತೆ ಜಗಳವಾಡಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಜಗದೀಶ್ ಹವಾ ಸ್ವಲ್ಪಮಟ್ಟಿಗೆ ಇಲ್ಲ... ಒಂಟಿ ಮನೆಯಲ್ಲಿ ಹೀರೋ ಕಂ ವಿಲನ್ ರೀತಿ ಆಡುತ್ತಿರುವ ಜಗದೀಶ್ ಕಳೆದ ಒಂದು ವಾರದಿಂದ ದೊಡ್ಮನೆಯಿಲ್ಲಿ ಭಾರೀ ಗದ್ದಲ ಸೃಷ್ಟಿಸುತ್ತಿದ್ದಾರೆ. ಇನ್ನು ಇವರ ಕುಟುಂಬ ಹೇಗಿದೆ? ಅವರ ಪತ್ನಿ ಯಾರು? ಎಂಬ ಬಗ್ಗೆ ಈ ವರದಿಯಲ್ಲಿ ನಿಮಗೆ ಮಾಹಿತಿ ನೀಡಲಿದ್ದೇವೆ.
ಜಗದೀಶ್ ವಕೀಲರಾಗಿದ್ದು, ಕರ್ನಾಟಕ ಹೈಕೋರ್ಟ್‌ನಲ್ಲಿ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾನೂನು ಹೋರಾಟಗಳು ಮತ್ತು ಪ್ರಮುಖ ರಾಜಕಾರಣಿಗಳಿಗೆ ಸಂಬಂಧಿಸಿದ ವಿವಾದಗಳ ಮೂಲಕವೇ ಜಗದೀಶ್ ಸುದ್ದಿಯಾಗಿದ್ದರು.
ಇನ್ನು ಕೇವಲ ಕಾನೂನು ವಲಯದಲ್ಲಿ ಗುರುತಿಸಿಕೊಂಡಿದ್ದ ಲಾಯರ್ ಜಗದೀಶ್ ಅವರು, ಬಿಗ್ ಬಾಸ್ ಮನೆಗೆ ಎಂಟ್ರಿಯಾದ ಸಂದರ್ಭದಲ್ಲಿ ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದರು. ಇನ್ನು ಜಗದೀಶ್ ಅವರ ಪತ್ನಿ ಯಾರು? ಹೇಗಿದ್ದಾರೆ? ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದ್ದು, ಗೂಗಲ್‌ನಲ್ಲಿ ಅವರನ್ನು ಅನೇಕರು ಹುಡುಕಾಡಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ.
ಲಾಯರ್ ಜಗದೀಶ್ ಅವರು ತಮಗೆ ಪಾಠ ಹೇಳಿಕೊಟ್ಟ ಮೇಷ್ಟ್ರ ಅಕ್ಕನ ಮಗಳನ್ನೇ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಈ ಕುರಿತಾಗಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಜಗದೀಶ್ ಅವರ 2ನೇ ಪತ್ನಿ ಹೆಸರು ಸೌಮ್ಯ. ಈ ದಂಪತಿಗೆ ಓರ್ವ ಪುತ್ರನಿದ್ದು ಅವರು ಕೂಡ ಲಾ ಓದುತ್ತಿದ್ದಾರೆ. ಇನ್ನು ಜಗದೀಶ್ ಅವರ ಪತ್ನಿ ಸೌಮ್ಯಾ ಕೂಡಾ ವಕೀಲೆಯಂತೆ.
ಇತ್ತೀಚೆಗೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸವಿರುಚಿ ಅಡುಗೆ ಕಾರ್ಯಕ್ರಮಕ್ಕೆ ಜಗದೀಶ್ ಅವರ ಪತ್ನಿ ಸೌಮ್ಯ ಆಗಮಿಸಿದ್ದರು. ಈ ವೇಳೆ ಪತಿ ಕುರಿತಾಗಿ ಹಲವಾರು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದರ ಕುರಿತಾಗಿ ವಾಹಿನಿಯು ಪ್ರೋಮೋ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.