ಆತ್ಮಹತ್ಯೆಗೆ ಯತ್ನಿಸಿದ ಪವಿತ್ರಾ..! ಇದ್ದ ಹಣವೂ ಹೋಯ್ತು, ಪ್ರೀತಿಸಿದ ಆ ವ್ಯಕ್ತಿಯೂ ದೂರ.. ನೋವಿನಲ್ಲಿ ನಟಿ..
'ಬಿಗ್ ಬಾಸ್' ಹಲವು ನಟ-ನಟಿಯರ ಭವಿಷ್ಯವನ್ನೇ ಬದಲಿಸಿದೆ. ವಿಜೇತರು ಮತ್ತು ಪೈನಲ್‌ಗೆ ಬಂದ ಸ್ಪರ್ಧಿಗಳಿಗೂ ಸಹ ಇದು ವರದಾನವಾಯ್ತು.
ಈ ಯಶಸ್ಸನ್ನು ಅರಗಿಸಿಕೊಳ್ಳಲು ಹಲವರಿಗೆ ಸಾಧ್ಯವಾಗಿಲ್ಲ. ಈ ಶೋನಿಂದ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದ ಈ ನಟಿಯ ಬದುಕು ಮಾತ್ರ ಹೀನಾವಾಯ್ತು..
ಬಿಗ್ ಬಾಸ್ ಶೋನಿಂದ ಹೊರ ಬಂದ ನಂತರ, ಈಕೆ ಗೆದ್ದ ಎಲ್ಲಾ ಹಣವನ್ನು ಕಳೆದುಕೊಂಡಳು.. ಅದರ ನಂತರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರು.
'ಬಿಗ್ ಬಾಸ್ 14' ನಲ್ಲಿ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಈ ಸುಂದರಿ, ಅನ್ಯ ಧರ್ಮದ ನಟನನ್ನು ಪ್ರೀತಿಸುತ್ತಿದ್ದಳು. ಶೋ ನಿಂತ ಹೊರಬಂದ ನಂತರ ಇಬ್ಬರೂ ಕೆಲವು ವರ್ಷಗಳ ಕಾಲ ಸಂಬಂಧದಲ್ಲಿದ್ದರು.
ಆದರೆ ಈಗ ಇಬ್ಬರೂ ಕಾರಣಾಂತರದಿಂದ ಬೇರ್ಪಟ್ಟರು.. ಅದರ ನಂತರ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ನಟಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದಳು..
ಈ ನಟಿಯ ಹೆಸರು ಪವಿತ್ರಾ ಪುನಿಯಾ.. 'ಬಿಗ್ ಬಾಸ್ 14' ಮತ್ತು 'ಸ್ಪ್ಲಿಟ್ಸ್ವಿಲ್ಲಾ 3' ನಿಂದ ಹೆಸರು ಗಳಿಸಿದರು. ಈ ವರ್ಷ ETimes ಗೆ ನೀಡಿದ ಸಂದರ್ಶನದಲ್ಲಿ, ನಟಿ ಕೊರೊನಾ ಅವಧಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು ಎಂದು ಹೇಳಿಕೊಂಡಿದ್ದಾಳೆ..
ಬಿಗ್ ಬಾಸ್ ನಿಂದ ಹೊರ ಬಂದ ನಂತರ ನನ್ನ ಪರಿಸ್ಥಿತಿ ಕಷ್ಟಕರವಾಯಿತು.. ಲಾಕ್‌ಡೌನ್‌ನಿಂದಾಗಿ ಆಕೆಗೆ ಕೆಲಸವೂ ಸಿಗಲಿಲ್ಲ. ಈ ಅವಧಿಯಲ್ಲಿ ಅವಳು ತನ್ನ ಜೀವನದ ಅತ್ಯಂತ ಕೆಟ್ಟ ಹಂತವನ್ನು ನೋಡಿದಳು. ಬಿಗ್ ಬಾಸ್ ನಿಂದ ಗಳಿಸಿದ ಹಣವೂ ಖಾಲಿಯಾಯ್ತುಂತೆ..
ಅಷ್ಟೇ ಅಲ್ಲ, ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಪೋಷಕರಿಗೆ ಹಣ ಕೇಳಲು ಸಾಧ್ಯವಿಲ್ಲ. ‘ಆಸ್ಪತ್ರೆಗೆ ದಾಖಲಾದರೂ ನಾನು ನನ್ನ ತಂದೆ ತಾಯಿಯಿಂದ ಹಣ ಕೇಳಲಿಲ್ಲ’ ಅಂತ ಪವಿತ್ರಾ ಅವರು ಹೇಳಿಕೊಂಡಿದ್ದಾರೆ...
ಇನ್ನಷ್ಟು ಮಾತನಾಡಿರುವ ಪವಿತ್ರಾ, "ನನ್ನ ತಂದೆ ನಾನು ಬಿಗ್ ಬಾಸ್ ಮನೆಯಿಂದ ಹೊರಬಂದ ಸುಮಾರು ಒಂದು ತಿಂಗಳ ನಂತರ ಅಪಘಾತಕ್ಕೀಡಾದರು, ಆಗ ನನ್ನ ಬಳಿ ಅವರ ಚಿಕಿತ್ಸೆಗೆ ಹೆಚ್ಚು ಹಣವಿರಲಿಲ್ಲ" ಎಂದು ಹೇಳಿಕೊಂಡಿದ್ದಾರೆ..
'ಬಿಗ್ ಬಾಸ್ 14' ನಿಂದ ಹೊರಬಂದ ನಂತರ ಪವಿತ್ರಾ ಪುನಿಯಾ ಅವರಿಗೆ ಒಂದೂವರೆ ವರ್ಷ ಕಠಿಣವಾಗಿದೆ. ಖಿನ್ನತೆಗೆ ಹೋದರಂತೆ. ಅಲ್ಲದೆ ಅವರಿಗೆ ಆತ್ಮಹತ್ಯೆಯ ಯೋಚನೆಯೂ ಶುರುವಾಯಿತಂತೆ.. ತಂದೆ-ತಾಯಿಯ ಆಶೀರ್ವಾದದಿಂದ ಈ ಕೆಟ್ಟ ಹಂತವನ್ನು ಜಯಿಸಲು ಸಾಧ್ಯವಾಯಿತು ಎಂದು ಪವಿತ್ರಾ ಹೇಳಿದ್ದಾರೆ.
ಪವಿತ್ರಾ ಪುನಿಯಾ ತುಂಬಾ ಧಾರ್ಮಿಕರು ಮತ್ತು ಮಾತೆ ದುರ್ಗೆಯನ್ನು ಪೂಜಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.. ಇತ್ತೀಚೆಗೆ ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆದಳು..