ಬಿಗ್ ಬಾಸ್ ನಲ್ಲಿ ಸಂಗೀತಾ ʻಕನ್ನಡ ಪತ್ರʼ ಓದದಿರಲು ಇದೇ ಅಸಲಿ ಕಾರಣ.. ನಿಮಗಿಂತ ಮೈಕೆಲ್ ಬೆಟರ್ ಎಂದ ನೆಟ್ಟಿಗರು!

Thu, 11 Jan 2024-2:20 pm,

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಟಾಸ್ಕ್‌ ಗಿಂತ ಹೆಚ್ಚಾಗಿ ಜಗಳದಿಂದಲೇ ಸದ್ದು ಮಾಡುವ ಸಂಗೀತಾ ಶೃಂಗೇರಿ ಧೈರ್ಯವನ್ನು ಇಡೀ ಕರುನಾಡೇ ಕೊಂಡಾಡುತ್ತಿದೆ. 

ತಪ್ಪು ಅನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವ ಸಂಗೀತಾ ಅವರ ಕುರಿತ ನೆಗೆಟಿವ್‌ ವಿಚಾರ ಒಂದು ಈಗ ಸದ್ದು ಮಾಡುತ್ತಿದೆ.

ಸಂಗೀತಾ ಶೃಂಗೇರಿ ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಆದರೆ ಮನೆಗೆ ಬರುವ ಯಾವ ಒಂದೇ ಒಂದೂ ಪತ್ರವನ್ನೂ ಇದೆವರೆಗೂ ಸಂಗೀತಾ ಓದಿಲ್ಲ.

ಸಂಗೀತಾ ಪತ್ರ ಓದದಿರುವ ಸಂಗತಿಯನ್ನು ಈಗ ನೆಟ್ಟಿಗರು ಗಮನಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಾಕಷ್ಟು ಚರ್ಚೆ ಕೂಡ ಶುರುವಾಗಿದೆ.

ಸಂಗೀತಾ ಶೃಂಗೇರಿ ಅವರ ತಂದೆ ಶಿವಕುಮಾರ್ ಏರ್‌ಫೋರ್ಸ್‌ನಲ್ಲಿದ್ದರು. ಹೀಗಾಗಿ ಸಂಗೀತಾ ಬೆಳೆದಿದ್ದು, ವಿದ್ಯಾಭ್ಯಾಸ ಮುಗಿಸಿದ್ದು ಎಲ್ಲವೂ ಮಿಲಿಟರಿ ಬ್ಯಾಗೌಂಡ್‌ನಲ್ಲಿಯೇ. 

ಈ ಹಿಂದೆ ಸಂದರ್ಶನವೊಂದರಲ್ಲಿ 'ನಾನು ಓದಿರೋದು ಕೇಂದ್ರೀಯ ವಿದ್ಯಾಲಯದಲ್ಲಿ. ಅಲ್ಲಿ ಕನ್ನಡ ವಿಷಯವೇ ಇರಲಿಲ್ಲ' ಎಂದು ಸಂಗೀತಾ ಹೇಳಿದ್ದರು.

ಕನ್ನಡವನ್ನೇ ಕಲಿಯದ ಸಂಗೀತಾಗೆ ಕನ್ನಡ ಓದಲು ಬರುವುದಿಲ್ಲ, ಹೀಗಾಗಿ ಅವರು ಮನೆಗೆ ಬರುವ ಪತ್ರವನ್ನು ಬೇರೆಯವರ ಬಳಿ ಓದಿಸುತ್ತಾರೆ ಎಂದು ಹಲವು ನೆಟ್ಟಿಜನ್ಸ್‌ ಮಾತನಾಡುತ್ತಿದ್ದಾರೆ. ಅಲ್ಲದೇ ಇನ್ನೂ ಕೆಲವರು ನಿಮಗಿಂತ ಮೈಕೆಲ್‌ ಬೆಟರ್‌ ಎಂದು ಹೇಳುತ್ತಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link