ಲವ್ ಮ್ಯಾರೇಜ್ ಆಗುತ್ತಿರುವ ಬಿಗ್ ಬಾಸ್ ಧರ್ಮಕೀರ್ತಿ !ಚಾಕಲೇಟ್ ಬಾಯ್ ವರಿಸುವ ಹುಡುಗಿ ಇವರೇ !

Thu, 28 Nov 2024-12:21 pm,

ಬಿಗ್ ಬಾಸ್ ಮನೆಯ ಅತ್ಯಂತ ಶಾಂತ ಸ್ವಭಾವದ ಸ್ಪರ್ಧಿ ಎನಿಸಿಕೊಂಡವರು ಧರ್ಮ ಕೀರ್ತಿ. ಗೆಲುವು ಬೇಕು ಎನ್ನುವ ಕಾರಣಕ್ಕೆ ಎಲ್ಲೂ ತನ್ನ ಸ್ವಭಾವದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರಿಗೂ ಇಷ್ಟವಾಗಿದ್ದ ಕಂಟೆಸ್ಟೆಂಟ್.   

ಧರ್ಮ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದ ಹಾಗೆಯೇ ಮದುವೆ ಯಾವಾಗ ಎನ್ನುವ ಪ್ರಶ್ನೆ ಏಳಲು ಆರಂಭಿಸಿದೆ. 

 ಧರ್ಮ ಮುಂದಿನ ವರ್ಷ ಅಂದರೆ 2025 ರಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆಯಂತೆ. ಹಾಗಂತೆ ಅವರೇ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.   

ಇನ್ನು ತಾನು ಇಷ್ಟ ಪಡುವ ಹುಡುಗಿಯನ್ನೇ ಮದುವೆಯಾಗುವುದಾಗಿ ಧರ್ಮ ಹೇಳಿದ್ದಾರೆ. ತಮ್ಮ ಮುದ್ದು ಮಗನ ಮದುವೆ ನೋಡಲು ಅವರ ಪೋಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ. 

ಮಗನಿಗೆ ಇಷ್ಟವಿರುವ ಹುಡುಗಿಯನ್ನು ಕರೆದುಕೊಂಡು ಬಂದರೆ ಮದುವೆ ಮಾಡಿಸುವುದಾಗಿ ಧರ್ಮ ಕೀರ್ತಿ ಪೋಷಕರು ಹೇಳಿದ್ದಾರೆಯಂತೆ. ಅಂದರೆ ವಧು ಹುಡುಕುವ  ಜವಾಬ್ದಾರಿ ಧರ್ಮನ ಮೇಲೆಯೇ ಇದೆ. 

ಸರಿಯಾದ ಘಳಿಗೆ ಕೂಡಿ ಬಂದರೆ ಎಲ್ಲವೂ ಸುಸೂತ್ರಗಿ ನಡೆಯುವುದು ಎಂದು ನಂಬಿರುವ ಧರ್ಮ, ಎಲ್ಲದ್ದಕ್ಕೂ ಕಾಲ ಕೂಡಿ ಬರಬೇಕು ಎನ್ನುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link