ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ 5 ಸ್ಪರ್ಧಿಗಳ ಹೆಸರು ರಿವೀಲ್‌ !

Mon, 23 Sep 2024-8:27 pm,

ಹೊಸ ಅಧ್ಯಾಯ ಎಂಬ ಹ್ಯಾಶ್‌ ಟ್ಯಾಗ್‌ ಜೊತೆಗೆ ಬರುತ್ತಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಹಲವು ವಿಶೇಷತೆಗಳು ಇರಲಿವೆ. 

ಸ್ವರ್ಗ ಮತ್ತು ನರಕ ಎಂಬ ಎರಡು ವರ್ಗಗಳೊಂದಿಗೆಯೇ ಈ ಬಾರಿ ಬಿಗ್‌ ಬಾಸ್‌ ಶೋ ಆರಂಭವಾಗಲಿದೆ. ಇದರ ಜೊತೆಗೆ ಮತ್ತೊಂದು ಬಿಗ್‌ ಟ್ವಿಸ್ಟ್‌ ಈ ಬಾರಿ ಇರಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗುವ ಮೊದಲೇ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಾಗುವುದು ಎಂದು ಇಂದು ನಡೆದ ಬಿಗ್‌ ಬಾಸ್‌ ಸುದ್ದಿಗೋಷ್ಠಿಯಲ್ಲಿ ಸುದೀಪ್‌ ತಿಳಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ ಸೆ.29 ಭಾನುವಾರದಿಂದ ಶುರುವಾಗಲಿದೆ. ಸೆ.28 ರಂದು ಅಂದರೆ ಶನಿವಾರ ಪ್ರಸಾರವಾಗುವ ರಾಜಾ ರಾಣಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಕೆಲವರ ಹೆಸರನ್ನು ರಿವೀಲ್‌ಮಾಡಲಾಗುತ್ತದೆ.

ಈ ಸ್ಪರ್ಧಿಗಳಲ್ಲಿ ಯಾರು ನರಕಕ್ಕೆ ಹೋಗಬೇಕು ಮತ್ತು ಯಾರು ಸ್ವರ್ಗಕ್ಕೆ ಹೋಗಬೇಕು ಎಂಬುದನ್ನು ಜನರು ಡಿಸೈಡ್‌ ಮಾಡಬೇಕಿದೆ. ಇದಕ್ಕಾಗಿ ವೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಜೀಯೋ ಸಿನಿಮಾ ಆಪ್‌ ಮೂಲಕ ಜನರು ವೋಟ್‌ ಮಾಡಬೇಕು. ಯಾರಿಗೆ ನರಕ ಮತ್ತು ಯಾರಿಗೆ ಸ್ವರ್ಗ ಎಂಬುದು ವೋಟಿಂಗ್‌ ಆಧಾರದ ಮೂಲಕ ನಿರ್ಧರಿಸಲಾಗುತ್ತದೆ. 

ಆ ಬಳಿಕ ಭಾನುವಾರದಿಂದ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಗ್ರ್ಯಾಂಡ್‌ ಓಪನಿಂಗ್‌ ನಡೆಯಲಿದೆ. ಕಿಚ್ಚ ಸುದೀಪ್‌‌ ಹೋಸ್ಟ್ ಆಗಿದ್ದು, ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಲಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link