ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ ಸ್ಪರ್ಧಿಯೇ ಔಟ್, ಫೈನಲಿಸ್ಟ್ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!
Bigg Boss Kannada 11 Elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಯಾರೂ ಊಹಿಸಿರದ ಸ್ಪರ್ಧಿಯೇ ಎಲಿಮಿನೇಟ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಸದ್ದು ಮಾಡಿದ್ದ ಈ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದಾರೆ.
ಕಿಚ್ಚ ಸುದೀಪ್ 9 ನೇ ವಾರದ ಪಂಚಾಯ್ತಿ ನಡೆಸಿದ್ದಾರೆ. ಮಂಜು, ಗೌತಮಿ ಮತ್ತು ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶನಿವಾರದ ಎಪಿಸೋಡ್‌ನಲ್ಲಿ ಇಬ್ಬರನ್ನು ಸುದೀಪ್ ಸೇವ್ ಮಾಡಿದ್ದಾರೆ.
ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯಾ ಗೌಡ, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಈ ವಾರ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ನಾಮಿನೇಟ್ ಆಗಿದ್ದರು.
ನಾಮಿನೇಟ್ ಆದ 7 ಜನರಲ್ಲಿ ಗೋಲ್ಡ್ ಸುರೇಶ್ ಮತ್ತು ತ್ರಿವಿಕ್ರಮ್ ಅವರನ್ನು ಸುದೀಪ್ ಶನಿವಾರದ ಪಂಚಾಯ್ತಿಯಲ್ಲಿ ಸೇವ್ ಮಾಡಿದ್ದಾರೆ.
ರವಿವಾರದ ವೀಕೆಂಡ್ ಎಪಿಸೋಡ್‌ನಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಬರುತ್ತಲೇ ಸದ್ದು ಮಾಡಿದ್ದ ಈ ಸ್ಪರ್ಧಿ ಎಲಿಮಿನೇಟ್ ಆಗಿದ್ದು ಅಚ್ಚರಿ ಮೂಡಿಸಿದೆ.
ಶೋಭಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ. ಅತಿ ಕಡಿಮೆ ವೋಟ್ ಪಡೆದ ಕಾರಣ ಶೋಭಾ ಶೆಟ್ಟಿ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗಿದೆ.
ವೈಲ್ಡ್ ಕಾರ್ಡ್ ಮೂಲಕ ಬಂದ ಶೋಭಾ ಶೆಟ್ಟಿ ಆರಂಭದಲ್ಲಿ ಸಖತ್ ಸದ್ದು ಮಾಡಿದ್ದರು. ಆದರೆ ಈ ವಾರ ಪೂರ್ತಿ ಸೈಲೆಂಟ್ ಆಗಿದ್ದರು. ಎಲಿಮಿನೇಷನ್ ಭಯ ಕೂಡ ಅವರನ್ನು ಕಾಡುತ್ತಿತ್ತು.
ವರದಿಗಳ ಪ್ರಕಾರ, ಈ ವಾರ ನಡೆದ ಟಾಸ್ಕ್‌ಗಳಲ್ಲಾಗಲಿ, ಮನೆಯ ಜಗಳದಲ್ಲಾಗಲಿ ಎಲ್ಲಿಯೂ ಶೋಭಾ ಶೆಟ್ಟಿ ಹೈಲೈಟ್ ಆಗಲೇ ಇಲ್ಲ. ಇದೇ ಅವರ ಎಲಿಮಿನೇಷನ್ ಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ಇಂದು ರಾತ್ರಿ ಪ್ರಸಾರವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಸಂಚಿಕೆಯಲ್ಲಿ ನಟ ಸುದೀಪ್ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.