ಬಿಗ್ ಬಾಸ್ ನಲ್ಲಿ ಅಚ್ಚರಿಯ ಎಲಿಮಿನೇಷನ್.. ಸಿಕ್ಕಾಪಟ್ಟೆ ಫೈಟ್ ಕೊಟ್ಟ ಸ್ಟ್ರಾಂಗೆಸ್ಟ್ ಕಂಟೆಸ್ಟಂಟ್ ಔಟ್! ಅತಿಯಾದ ಜಗಳವೇ ಆಟಕ್ಕೆ ಮುಳುವಾಯ್ತಾ?
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ 13 ನೇ ವಾರದ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಸರ್‌ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಮಹಿಳಾ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ.
ಕಿಚ್ಚ ಸುದೀಪ್ ಈ ಸೀಸನ್‌ನ 13ನೇ ವಾರದ ಪಂಚಾಯಿತಿ ನಡೆಸಿದ್ದಾರೆ. ಈ ವೇಳೆ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಆದ ಗೊಂದಲವನ್ನು ಸರಿಪಡಿಸಿದ್ದಾರೆ. ಜೊತೆಗೆ ಯಾರ ತಪ್ಪು ಎಲ್ಲಿ ಹೇಗಾಯ್ತು ಎಂಬುದನ್ನು ಮನವರಿಕೆ ಮಾಡಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಭವ್ಯಾ ಗೌಡ ಮತ್ತು ರಜತ್ ಬಿಟ್ಟು ಉಳಿದ 8 ಜನ ನಾಮಿನೇಟ್ ಆಗಿದ್ದರು. ಚೈತ್ರ ಕುಂದಾಪುರ, ಗೌತಮಿ ಜಾಧವ್, ಮೋಕ್ಷಿತಾ, ಉಗ್ರಂ ಮಂಜು, ಧನರಾಜ್, ಹನಮಂತು, ತ್ರಿವಿಕ್ರಮ್ ಮತ್ತು ಐಶ್ವರ್ಯಾ ನಾಮಿನೇಟ್ ಆಗಿದ್ದರು.
ಬಿಗ್ ಬಾಸ್ ಕನ್ನಡ 11 ರಲ್ಲಿ ಧನರಾಜ್ ಮತ್ತು ಹನಮಂತು ಸೇವ್ ಆಗಿದ್ದಾರೆ. ಆ ಬಳಿಕ ತ್ರಿವಿಕ್ರಮ್, ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಸೇವ್ ಆಗಿದ್ದಾರೆ. ಬಾಟಮ್ ಟು ನಲ್ಲಿ ಚೈತ್ರ ಕುಂದಾಪುರ ಮತ್ತು ಐಶ್ವರ್ಯಾ ಸಿಂದೋಗಿ ಬಂದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಅಚ್ಚರಿಯ ಎಲಿಮಿನೇಷನ್ ನಡೆದಿದ್ದು, ಬಿಗ್ ಬಾಸ್ ಮನೆಯಲ್ಲಿ ಮಾತಿನಿಂದಲೇ ಸದ್ದು ಮಾಡಿದ್ದ ಈ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ.
ಐಶ್ವರ್ಯಾ ಸಿಂದೋಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಈ ವಾರ ಎಲಿಮಿನೇಟ್ ಆಗಲಿದ್ದಾರೆ. ಅತಿ ಕಡಿಮೆ ವೋಟ್ ಪಡೆದ ಕಾರಣ ಐಶ್ವರ್ಯಾ ಸಿಂದೋಗಿ ಮನೆಯಿಂದ ಆಚೆ ಬಂದಿದ್ದಾರೆ.
ಐಶ್ವರ್ಯಾ ಸಿಂದೋಗಿ ಇತ್ತೀಚೆಗೆ ಮಾತು ಮಾತಿಗೂ ಜಗಳಕ್ಕೆ ನಿಲ್ಲುತ್ತಿದ್ದರು. ಟಾರ್ಗೆಟ್ ನಾಮಿನೇಷನ್ ಬಗ್ಗೆ ಮಾತನಾಡಿ ತಾವೇ ಟಾರ್ಗೆಟ್ ಆಗಿ ಬಿಟ್ಟಿದ್ದರು. ಈ ಕಾರಣಗಳೇ ಅವರ ಆಟಕ್ಕೆ ಮುಳುವಾಯ್ತಾ ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ.
ಇಂದು ರಾತ್ರಿ ನಡೆಯಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ವೀಕೆಂಟ್ ಸಂಚಿಕೆಯಲ್ಲಿ ನಟ ಸುದೀಪ್ ಮನೆಯಿಂದ ಎಲಿಮಿನೇಟ್ ಆಗುವ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.