BBK 11 Elimination: ನಾಮಿನೇಷನ್ ವಿಚಾರದಲ್ಲಿ ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್.. ಮಂಜಣ್ಣನದ್ದೇ ರಾಜ್ಯಭಾರ!
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ 9 ನೇ ವಾರ ನಡೆಯುತ್ತಿದೆ. ಈ ವಾರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.
ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಮಂಜು ಅವರು ರಾಜನಾಗಿದ್ದಾರೆ. ಬಿಗ್ ಬಾಸ್ ಸಾಮ್ರಾಜ್ಯದ ರಾಜನಾದ ಮಂಜು ಹೇಳಿದಂತೆ ಪ್ರಜೆಗಳೆಲ್ಲ ಕೇಳಬೇಕಿದೆ.
ವಾರದ ಆರಂಭದಲ್ಲೇ ಮಂಜು ರಾಜನಾಗಿ ಮಿಂಚುತ್ತಿದ್ದಾರೆ. ಮಂಗಳವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಟ್ವಿಸ್ಟ್ ಒಂದನ್ನ ಬಿಗ್ ಬಾಸ್ ನೀಡಿದ್ದರು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಯಾರನ್ನೂ ಕನ್ಫೆಷನ್ ರೂಮ್ಗೆ ಕರೆಸದೇ ನೇರ ನಾಮಿನೇಷನ್ ನಡೆಯಿತು. ಈ ವೇಳೆ ಪ್ರತಿ ಸ್ಪರ್ಧಿ ಬಂದು ತಾವು ನಾಮಿನೇಟ್ ಮಾಡುವ ಇಬ್ಬರು ಸದಸ್ಯರ ಹೆಸರು ಹೇಳಿ ಕಾರಣ ನೀಡಬೇಕಿತ್ತು.
ಈ ಕಾರಣ ರಾಜನಾದ ಮಂಜುಗೆ ಸೂಕ್ತವೆನಿಸಿದರೆ ಮಾತ್ರ ಆ ಸ್ಪರ್ಧಿ ನಾಮಿನೇಟ್ ಆಗುತ್ತಿದ್ದರು. ಇಲ್ಲವೆಂದಾದಲ್ಲಿ ನಾಮಿನೇಷನ್ ಮಾಡಲು ಬಂದವರನ್ನೇ ನಾಮಿನೇಟ್ ಮಾಡುವ ಅಧಿಕಾರ ಮಂಜು ಅವರಿಗೆ ನೀಡಲಾಗಿತ್ತು.
ಇಲ್ಲಿ ಒಂದು ಬಿಲ್ಲು, ಒಂದಷ್ಟು ಬಾಣಗಳು ಜೊತೆಗೆ ಮನೆಯ ಎಲ್ಲ ಸದಸ್ಯರ ಫೋಟೋಗಳನ್ನು ಇಡಲಾಗಿತ್ತು. ನಾಮಿನೇಟ್ ಆದ ಸ್ಪರ್ಧಿಯ ಫೋಟೋಗೆ ಬಾಣ ಚುಚ್ಚಿ ಬಿಡಬೇಕಿತ್ತು. ಇದು ಮನೆಯ ಬಾಗಿಲಿನಿಂದ ಆಚೆಗೆ ಹೋಗಬೇಕಿತ್ತು. ಈ ರೀತಿಯಾಗಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಈ ವಾರ ನೇರ ನಾಮಿನೇಟ್ ನಡೆದ ಕಾರಣ ಮತ್ತು 9 ವಾರವಾದ ಕಾರಣ ಬಿಗ್ ಬಾಸ್ ಮನೆಯಲ್ಲಿ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಹೊರಹೋಗಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಆದರೆ ಈ ವಾರ ಯಾರು ಮನೆಯಿಂದ ಆಚೆ ಬರಲಿದ್ದಾರೆ ಎಂಬುದು ಭಾನುವಾರದ ಎಪಿಸೋಡ್ನಲ್ಲೇ ರಿವೀಲ್ ಆಗಲಿದೆ.