ಬಿಗ್ ಬಾಸ್ ಕನ್ನಡ ಫೈನಲಿಸ್ಟ್‌ಗಳ ಹೆಸರು ಲೀಕ್? ಈ ಇಬ್ಬರು ಕಂಟೆಸ್ಟಂಟ್ ಫಿನಾಲೆಗೆ ಬರೋದು ಫಿಕ್ಸ್!?
Bigg Boss Kannada 11 Finalist : ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಿನಾಲೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಈ ಹೊತ್ತಲ್ಲಿ ಬಿಗ್ ಬಾಸ್ ಕನ್ನಡ ಫೈನಲಿಸ್ಟ್‌ಗಳ ಬಗ್ಗೆ ಚರ್ಚೆ ಜೋರಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ದಿನೆ ದಿನೇ ಹೊಸ ತಿರುವು ಮೂಡುತ್ತಿದೆ. ವೀಕ್ ಅಂದವರೇ ಸ್ಟ್ರಾಮಗ್ ಆಗುತ್ತಿದ್ದು, ಸ್ಟ್ರಾಂಗ್ ಎಂದು ಕೊಂಡ ಸ್ಪರ್ಧಿಗಳೇ ಮನೆಯಿಂದ ಹೊರ ಬರುತ್ತಿದ್ದಾರೆ.
ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಶಿಶಿರ್ ತಮ್ಮ ಪ್ರಕಾರ ಫೈನಲಿಸ್ಟ್‌ಗಳು ಯಾರಾಗಬಹುದೆಂದು ಊಹಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ರಜತ್, ಮಂಜು, ತ್ರಿವಿಕ್ರಮ್ ಗೆ ಹನುಮಂತ ಹಾಗೂ ಧನರಾಜ್ ಕಾಂಪಿಟೇಷನ್ ಕೊಡ್ತಾರೆ.
ಹನುಮಂತ ಬುದ್ಧಿವಂತಿಕೆಯಿಂದ ಬಿಗ್ ಬಾಸ್ ಆಡುತ್ತಿದ್ದಾನೆ. ಹನುಮಂತ ಹಾಗೂ ಧನರಾಜ್ ಫಿನಾಲೆಗೆ ಹೋದರೆ ಆಶ್ಚರ್ಯವಿಲ್ಲ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಫೈನಲಿಸ್ಟ್ ಗಳ ಹೆಸರು ಹರಿದಾಡುತ್ತಿದ್ದು, ಇದರಲ್ಲಿ 6 ಜನರು ಮುಂಚೂಣಿಯಲ್ಲಿದೆ.
ಕೆಲವರ ಪ್ರಕಾರ, ಉಗ್ರಂ ಮಂಜು, ತ್ರಿವಿಕ್ರಮ್, ಹನಮಂತು, ಧನರಾಜ್ ಈ ನಾಲ್ಕು ಜನ ಬಿಗ್ ಬಾಸ್ ಫಿನಾಲೆ ತಲಪುತ್ತಾರೆ. ಭವ್ಯಾ ಗೌಡ ಅಥವಾ ಗೌತಮಿ ಜಾಧವ್ ಇಬ್ಬರಲ್ಲಿ ಒಬ್ಬರು ಫಿನಾಲೆಗೆ ಬರಬಹುದು ಎನ್ನಲಾಗುತ್ತಿದೆ.
ಇನ್ನು ಕೆಲವೇ ವಾರಗಳು ಬಿಗ್ ಬಾಸ್ ಫಿನಾಲೆಗೆ ಬಾಕಿ ಉಳಿದಿದ್ದು ಯಾರು ಫೈನಲಿಸ್ಟ್ ಆಗಲಿದ್ದಾರೆ ಮತ್ತು ಈ ಸೀಸನ್ ನ ವಿನ್ನರ್ ಯಾರೆಂಬ ಸತ್ಯಾಂಶ ಹೊರ ಬೀಳಲಿದೆ.