Bigg Boss Kannada: ಬಿಗ್ ಬಾಸ್ ಕನ್ನಡ OTT ಶುರು.!? ಈ ಬಾರಿ ಸ್ಪರ್ಧಿಗಳು ಯಾರು?

Mon, 05 Feb 2024-1:49 pm,

ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 9 ಆರಂಭಕ್ಕೂ ಮುನ್ನ ಬಿಗ್‌ ಬಾಸ್‌ ಕನ್ನಡ ಒಟಿಟಿ ಸೀಸನ್ ಶುರುವಾಗಿತ್ತು. 

ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸೋನು ಗೌಡ, ಆರ್ಯವರ್ಧನ್ ಗುರೂಜಿ ಸೇರಿ ಅನೇಕರು ಒಟಿಟಿ ಸೀಸನ್‌ ಗೆ ಸ್ಪರ್ಧಿಗಳಾಗಿ ಬಂದಿದ್ದರು. 

ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ ಮುಗಿದ ನಂತರ, ಬಿಗ್ ಬಾಸ್ ಕನ್ನಡ 9 ಟಿವಿ ಸೀಸನ್ ಶುರುವಾಗಿತ್ತು. 

ಇದೀಗ ಮತ್ತೆ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 2 ಬರಬಹುದು ಎನ್ನಲಾಗ್ತಿದೆ. ಇದು ಸತ್ಯವೇ? ಜಿಯೋ ಸಿನಿಮಾ ಮೂಲಗಳ ಪ್ರಕಾರ, ಇದು 100 ಪರ್ಸೆಂಟ್‌ ನಿಜವಲ್ಲ. ಸದ್ಯ ಎಲ್ಲವೂ ಮಾತುಕತೆ ಹಂತದಲ್ಲಿದೆ ಎನ್ನಲಾಗಿದೆ.

ಸುದೀಪ್ ‘ಮ್ಯಾಕ್ಸ್’ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 2  ಶುರುವಾಗಲು ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಕಾಲ್‌ಶೀಟ್‌ ಸಿಗಬೇಕು. ಅಲ್ಲದೇ, ಸಿಸಿಎಲ್‌ 10 ಕೂಡ ಶುರುವಾಗುತ್ತಿದೆ.

ಒಟಿಟಿ ಸೀಸನ್ ಬರುವ ಬಗ್ಗೆ ಜಿಯೋ ಸಿನಿಮಾ ಆಗಲಿ, ಬಿಗ್‌ ಬಾಸ್‌ ಟೀಮ್‌ ಆಗಲಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link