ಬಿಗ್ ಬಾಸ್ ಸಂಗೀತಾ ಫಿನಾಲೆ ಟಿಕೆಟ್ ಪಡೆದದ್ದು ಪ್ರಿ ಡಿಸೈಡೆಡ್? ಅತಿ ಹೆಚ್ಚು ಅಂಕ ಗಳಿಸಿಯೂ ಫೈನಲ್ ತಲುಪದ ಪ್ರತಾಪ್!
ಬಿಗ್ ಬಾಸ್ ಕನ್ನಡ ಸೀಸನ್ 10 ರ ಟಿಕೆಟ್ ಟು ಫಿನಾಲೆ ವಾರದ ಕೊನೆಯಲ್ಲಿ ಒಂದು ಟ್ವಿಸ್ಟ್ ಇತ್ತು. ಮೊದಲು ಬಿಗ್ ಬಾಸ್ ನೀಡುವ ಟಾಸ್ಕ್ ಆಡಿ ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರು ಫಿನಾಲೆಗೆ ಹೋಗುತ್ತಾರೆ ಎನ್ನಲಾಗಿತ್ತು.
ಬಿಗ್ ಬಾಸ್ ನೀಡಿದ ಟಾಸ್ಕ್ ಅನುಸಾರ ಆಡಿ ಡ್ರೋನ್ ಪ್ರತಾಪ್ 420 ಅಂಕ ಗಳಿಸಿದ್ದರು. ಮನೆಯ ಇತರ ಸದಸ್ಯರಿಗಿಂತ ಪ್ರತಾಪ್ ಹೆಚ್ಚು ಪಾಯಿಂಟ್ಸ್ ಹೊಂದಿದ್ದರು. ಕೊನೆಯ ಟಾಸ್ಕ್ ಮುಕ್ತಾಯವಾದಾಗ ಎಲ್ಲರೂ ಪ್ರತಾಪ್ ಫಿನಾಲೆಗೆ ಹೋದರೆಂದೇ ಭಾವಿಸಿದರು.
ಬಿಗ್ ಬಾಸ್ ಆಗ ಒಂದು ಟ್ವಿಸ್ಟ್ ನೀಡಿದರು. ಹೆಚ್ಚು ಅಂಕ ಪಡೆದ ಮೂವರು ಸ್ಪರ್ಧಿಗಳ ಮಧ್ಯೆ ವೋಟಿಂಗ್ ನಡೆಸಿದರು. ವಿನಯ್ - ನಮ್ರತಾಗೆ ಮತ ನೀಡಿದರು. ಸಂತೋಷ್, ತನಿಷಾ, ತುಕಾಲಿ - ಸಂಗೀತಾ ಪರ ಬ್ಯಾಟ್ ಬೀಸಿದರು. ವರ್ತೂರ್ - ಪ್ರತಾಪ್ ಗೆ ವೋಟ್ ಮಾಡಿದರು.
ಸಂಗೀತಾ ಅತಿ ಹೆಚ್ಚು ವೋಟ್ ಪಡೆದರು. ಪ್ರತಾಪ್ 420 ಪಾಯಿಂಟ್ಸ್ ಹೊಂದಿದ್ದರೂ ಅವರಿಗೆ ಒಂದೇ ಒಂದು ವೋಟ್ ಬಂದ ಕಾರಣ, ಫಿನಾಲೆಗೆ ಎಂಟ್ರಿ ಪಡೆಯಲಿಲ್ಲ. ಇದು ಪ್ರತಾಪ್ ಅಸಮಾಧಾನಕ್ಕೆ ಮಾತ್ರವಲ್ಲ ಅವರ ಫ್ಯಾನ್ಸ್ ಆಕ್ರೋಶಕ್ಕೂ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈ ಪ್ರಕ್ರಿಯೆ ಬಳಿಕ ಪ್ರತಾಪ್ ಬೇಸರಗೊಂಡರು. ಕೆಲ ಸಮಯದ ಬಳಿಕ ಸಂಗೀತಾಗೆ ವಿಶ್ ಮಾಡುವಾಗ "ನನಗೆ ಇದು ಪ್ರಿ ಡಿಸೈಡೆಡ್ ಅನಿಸಿತು" ಎಂದು ಹೇಳಿದರು. ಅದಕ್ಕೆ ಸಂಗೀತಾ "ಏನು ಪ್ರಿ ಡಿಸೈಡೆಡ್" ಎಂದರು. "ಮನೆಯವರೆಲ್ಲ ನಿಮಗೆ ವೋಟ್ ಮಾಡಬೇಕೆಂದೇ ನಿರ್ಧರಿಸಿದ್ದರು, ಅದು ಪ್ರಿ ಡಿಸೈಡೆಡ್" ಎಂದು ಪ್ರತಾಪ್ ಹೇಳಿದರು.
ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಪ್ರತಾಪ್ ಅತಿ ಹೆಚ್ಚು ಪಾಯಿಂಟ್ಸ್ ಇದ್ದರೂ ಫಿನಾಲೆಗೆ ಹೋಗದಿರುವುದು, ವೋಟಿಂಗ್ ನಡೆಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಾಪ್ ಪರ ತಮ್ಮ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ.